ಹುಂಡಿ ರಕ್ಷಿಸಿಕೊಳ್ಳಲಾಗದ ತಿಮ್ಮಪ್ಪನಿಂದ ಭಕ್ತರ ರಕ್ಷಣೆ ಸಾಧ್ಯವೇ : ಕನಿಮೋಳಿ

First Published 13, Jan 2018, 9:22 AM IST
Kanimozi Says How Tirupathi Timmappa Care Pilgrims
Highlights

ದರ್ಶನಕ್ಕೆ ಬಡವರು ಉದ್ದದ ಸರತಿ ಸಾಲಲ್ಲಿ ನಿಂತು ಕೊಳೆಯುತ್ತಾರೆ. ತನ್ನ ಹುಂಡಿಯನ್ನೇ ರಕ್ಷಿಸಿಕೊಳ್ಳಲಾಗದ ತಿಮ್ಮಪ್ಪನಿಗೆ ಭಕ್ತರ ರಕ್ಷಣೆ ಮಾಡಲು ಸಾಧ್ಯವೇ? ವೆಂಕಟೇಶ್ವರ ನಿಜವಾಗಿಯೂ ದೇವರೇ ಆಗಿದ್ದರೆ ಆತನಿಗೆ ಭದ್ರತೆ ಏಕೆ ಬೇಕು?’ ಎಂದು ಕನಿಮೋಳಿ ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.

ನವದೆಹಲಿ: ತಿರುಪತಿ ತಿಮ್ಮಪ್ಪನ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಡಿಎಂಕೆ ನಾಯಕಿ ಕನಿಮೋಳಿ ವಿರುದ್ಧ ಹೈದರಾಬಾದ್‌ನ ಸೈದಾಬಾದ್ ಠಾಣೆಯಲ್ಲಿ ವಕೀಲರೊಬ್ಬರು ದೂರೊಂದನ್ನು ದಾಖಲಿಸಿ ದ್ದಾರೆ. ‘ತಿರುಪತಿ ವೆಂಕಟೇಶ ಕೇವಲ ಶ್ರೀಮಂತರ ದೇವರು.

ದರ್ಶನಕ್ಕೆ ಬಡವರು ಉದ್ದದ ಸರತಿ ಸಾಲಲ್ಲಿ ನಿಂತು ಕೊಳೆಯುತ್ತಾರೆ. ತನ್ನ ಹುಂಡಿಯನ್ನೇ ರಕ್ಷಿಸಿಕೊಳ್ಳಲಾಗದ ತಿಮ್ಮಪ್ಪನಿಗೆ ಭಕ್ತರ ರಕ್ಷಣೆ ಮಾಡಲು ಸಾಧ್ಯವೇ? ವೆಂಕಟೇಶ್ವರ ನಿಜವಾಗಿಯೂ ದೇವರೇ ಆಗಿದ್ದರೆ ಆತನಿಗೆ ಭದ್ರತೆ ಏಕೆ ಬೇಕು?’ ಎಂದು ಕನಿಮೋಳಿ ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.

ಕನಿಮೋಳಿ ಅವರ ಹೇಳಿಕೆಯನ್ನು ಖಂಡಿಸಿ ಐಪಿಸಿ ಸೆಕ್ಷನ್ 295 -ಎ (ಧಾರ್ಮಿಕ ಭಾವನೆಗೆ ಘಾಸಿ) ಅಡಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಕಾನೂನು ತಜ್ಞರ ಸಲಹೆ ಕೇಳಿ ದೂರು ಸ್ವೀಕಾರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

loader