ಇತ್ತೀಚೆಗೆ ನಡೆದ ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮದಲ್ಲೂ ಕನ್ಹಯ್ಯಕುಮಾರ್ ರಾಷ್ಟ್ರೀಯವಾದಿಗಳನ್ನು ಕುಟುಕಿದ್ದರು. ಪತಂಜಲಿ ಉತ್ಪನ್ನಗಳನ್ನು ಬಳಸದಿದ್ದವರಿಗೆ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಟೀಕಿಸಿದ್ದರು. "ದೇಶದಲ್ಲಿ ಭಯದ ವಾತಾವರಣ ಹೇಗಿದೆ ಎಂದರೆ ನೀವು ಪತಂಜಲಿ ಫೇಸ್'ವಾಶ್ ಬಳಸದಿದ್ದರೆ ನಿಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ" ಎಂದವರು ವಿವರಿಸಿದ್ದರು.
ನವದೆಹಲಿ(ಜೂನ್ 05): ಇತ್ತೀಚೆಗೆ ಭಾರತೀಯ ಸೈನಿಕರನ್ನು ಟೀಕಿಸಿ ದೊಡ್ಡ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಜೆಎನ್'ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ನೀಡಿದ ಮತ್ತೊಂದು ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ವೇಳೆ ಕನ್ಹಯ್ಯಕುಮಾರ್ ಅವರು ಆರೆಸ್ಸೆಸ್ ಸಂಘಟನೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿರುವುದು ವರದಿಯಾಗಿದೆ. "ಆರೆಸ್ಸೆಸ್ಸಾಗಲೀ, ಅಥವಾ ಐಸಿಸ್ ಆಗಲೀ ಯಾವುದೇ ರೀತಿಯ ಉಗ್ರವಾದವೂ ಸ್ವೀಕಾರರ್ಹವಲ್ಲ. ಇದು ದೇಶಕ್ಕೆ ಮಾರಕ" ಎಂದು ಕನ್ಹಯ್ಯಕುಮಾರ್ ಹೇಳಿದರೆಂದು ಟೈಮ್ಸ್ ನೌ ಸುದ್ದಿ ವಾಹಿನಿ ವರದಿ ಮಾಡಿದೆ.
ಇತ್ತೀಚೆಗೆ ನಡೆದ ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮದಲ್ಲೂ ಕನ್ಹಯ್ಯಕುಮಾರ್ ರಾಷ್ಟ್ರೀಯವಾದಿಗಳನ್ನು ಕುಟುಕಿದ್ದರು. ಪತಂಜಲಿ ಉತ್ಪನ್ನಗಳನ್ನು ಬಳಸದಿದ್ದವರಿಗೆ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಟೀಕಿಸಿದ್ದರು. "ದೇಶದಲ್ಲಿ ಭಯದ ವಾತಾವರಣ ಹೇಗಿದೆ ಎಂದರೆ ನೀವು ಪತಂಜಲಿ ಫೇಸ್'ವಾಶ್ ಬಳಸದಿದ್ದರೆ ನಿಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ" ಎಂದವರು ವಿವರಿಸಿದ್ದರು.
"ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಹಲವು ರೀತಿಯಲ್ಲಿ ಸ್ವಾತಂತ್ರ್ಯ ಸಿಗಲನುವಾಗವಂತೆ ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸಿದ್ದಾರೆ. ಆದರೆ, ಸಂವಿಧಾನದಲ್ಲಿ ಅಡಕವಾಗಿರುವ ಸ್ವಾತಂತ್ರ್ಯವು ಸಮಾಜದ ದೊಡ್ಡ ವರ್ಗಕ್ಕೆ ಇನ್ನೂ ಲಭಿಸಿಲ್ಲ" ಎಂದು ಕನ್ಹಯ್ಯಕುಮಾರ್ ಹೇಳಿದ್ದಾರೆ.