ಉಡುಪಿ ನಗರದಲ್ಲಿ ಆಯೋಜಿಸಲಾಗಿದ್ದ ಕನಕ ನಡೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಯುವ ಬ್ರಿಗೇಡ್  ಕಾರ್ಯಕರ್ತರು ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಉಡುಪಿ (ಅ.23): ಉಡುಪಿಯಲ್ಲಿ ಆಯೋಜಿಸಲಾಗಿದ್ದ ಕನಕ ನಡೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಯುವ ಬ್ರಿಗೇಡ್ ಕಾರ್ಯಕರ್ತರು ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುವ ಬ್ರಿಗೇಡ್ ನೇತೃತ್ವದಲ್ಲಿ ಕನಕ ನಡೆ ಹೆಸರಲ್ಲಿ ನಗರದ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿತ್ತು. ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿತ್ತು.

ಯುವ ಬ್ರಿಗೇಡ್​​​​​ಗೆ ಇಂದು ಡೂಮ್ಸ್ ಡೇ. ಈ ದಿನಕ್ಕಾಗಿ ಕಾಯುತ್ತಿದ್ದೆವು, ಕನಕ ನಡೆ ಕೃಷ್ಣ ಮಠಕ್ಕೆ ಸೀಮಿತ. ನಾವು ರಸ್ತೆಗೆ ಇಳಿಯುವುದಿಲ್ಲ ಸರ್ಕಾರದ ಆದೇಶ ಧಿಕ್ಕರಿಸಲ್ಲ. ಇದು ಚಲೋ ಉಡುಪಿ, ದಲಿತ ವಿರೋಧಿ ಅಲ್ಲ. ಕನಕ ನಡೆಯಲ್ಲಿ ಹೆಚ್ಚು ದಲಿತರೇ ಇದ್ದಾರೆ. ಕನಕನ ಮಾರ್ಗದಲ್ಲಿ ಕೃಷ್ಣನನ್ನು ನೋಡುತ್ತೇವೆ.

ಚಕ್ರವರ್ತಿ ಸೂಲಿಬೆಲೆ, ಯುವಬ್ರಿಗೇಡ್​​ ಮುಖಂಡ

ಹೀಗಾಗಿ ಯುವ ಬ್ರಿಗೇಡ್​, ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದೆ. ಕನಕ ನಡೆ ಆಯೋಜನೆಯಾದರೆ ಅದಕ್ಕೆ ಪ್ರತಿಯಾಗಿ ಸ್ವಾಭಿಮಾನಿ ಜಾಥಾ ನಡೆಸುವುದಾಗಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಎಚರಿಸಿದ್ದವು. ಇದರಿಂದ ಸಂಘರ್ಷವಾಗಬಹುದು ಎನ್ನುವ ಕಾರಣಕ್ಕೆ ಎರಡೂ ಕಾರ್ಯಕ್ರಮಕ್ಕೆ ಅನುಮತಿ ನಿರಕರಿಸಲಾಗಿತ್ತು.

ಇದೊಂದು ಸಾಂಕೇತಿಕ ಸ್ವಚ್ಛತಾ ಕಾರ್ಯಕ್ರಮ. ಕ್ರಾಂತಿಯಲ್ಲ ಇದು ಶಾಂತಿಯ ಆಂದೋಲನ. ರಸ್ತೆ, ಉದ್ಯಾನ, ಗಲ್ಲಿಗಳು ಸ್ವಚ್ಛವಾಗಬೇಕು. ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿಯೂ ಆಗಬೇಕು. ಕನಕ ನಡೆ ಸರ್ಕಾರದ ಆದೇಶದ ಮಿತಿಯಲ್ಲಿ ನಡೆಯುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಲಿ.

ಪೇಜಾವರಶ್ರೀ

ಇನ್ನು ಅಹಿತಕರ ಘಟನೆ ನಡೆಯದಂತೆ ಮಠದ ಸುತ್ತ ಬಿಗಿ ಪೋಲಿಸ್ ಭದ್ರತೆ ಮಾಡಲಾಗಿದ್ದು, 5 ಕೆ.ಎಸ್.ಆರ್.ಪಿ, 10 ಡಿ.ಎ.ಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ.