ಬೆಂಗಳೂರು [ಜು.22] :  ರಾಜ್ಯ ರಾಜಕೀಯದಲ್ಲಿ ವಿಪ್ಲವ ಮುಂದುವರಿದಿದೆ. ಮೈತ್ರಿ ಪಾಳಯ ಇಂದು ವಿಶ್ವಾಸ ಮತ ಯಾಚನೆ ಮಾಡುವ ಸಾಧ್ಯತೆ ಇದ್ದು, ಸರ್ಕಾರ ಅಳಿವು, ಉಳಿವಿನ ಬಗ್ಗೆ ಶಂಕೆ ಇದೆ. 

ಕಳೆದ ಎರಡು ದಿನಗಳ ಹಿಂದೆ ವಿಧಾನಸೌಧಕ್ಕೆ ಆಗಮಿಸಿ ಮತ್ತೆ ವಾಪಸ್ ತೆರಳಲು ಯತ್ನಿಸಿದ್ದ ಕಂಪ್ಲಿ ಶಾಸಕ ಗಣೇಶ್ ಇಂದು ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಲಿಗೆ ಎರಗಿದ್ದಾರೆ. 

ಇನ್ನು ಇತ್ತ ರೆಬೆಲ್ ನಾಯಕರೂ ಇಂದೂ ಕೂಡ ಗೈರಾಗಿದ್ದು, ಕೊನೆಯ ಹಂತದಲ್ಲಿ ಯತ್ನವನ್ನು ಮೈತ್ರಿ ನಾಯಕರು ಮುಂದುವರಿಸಿದ್ದಾರೆ. ಆದರೆ ಬಿಗಿ ಪಟ್ಟು ಹಿಡಿದು ಕುಳಿತಿರುವ ಅತೃಪ್ತರು ವಿಶ್ವಾಸಮತಕ್ಕೆ ಆಗಮಿಸುವುದಿಲ್ಲ ಎಂದು ಹೇಳಿದ್ದಾರೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತ ಬಿಜೆಪಿ ನಾಯಕರು ಸರ್ಕಾರ ಮೈತ್ರಿ ಸರ್ಕಾರ ಉರುಳುವ ಭರವಸೆಯಲ್ಲಿದ್ದು, ರಚನೆ ಮಾಡುವ ವಿಶ್ವಾಸ ಹೊಂದಿದ್ದಾರೆ.