ಜನವರಿ 24ರಂದು ಕಂಬಳ ಕುರಿತು ಕೋರ್ಟ್​ ತೀರ್ಪು ಹೊರ ಬೀಳಲಿದೆ. ಅಂದು ತೀರ್ಪು ಪರವಾಗಿ ಬಂದರೆ ಶನಿವಾರ ಕೋಟಿ ಚಿನ್ನಯ ಜೋಡುಕೆರೆ ಕಂಬಳ ನಡೆಸಿ ಸಂಭ್ರಮಾಚರಣೆ ಮಾಡಲಾಗುವುದು. ತೀರ್ಪು ವಿರುದ್ಧವಾಗಿ ಬಂದರೆ ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಮಂಗಳೂರು (ಜ.23): ಜಲ್ಲಿಕಟ್ಟಿಗೆ ಕೇಂದ್ರದ ಅನುಮತಿ ಸಿಕ್ಕಿರುವ ಬೆನ್ನಲ್ಲೆ ಕರ್ನಾಟಕದಲ್ಲಿ ಕಂಬಳದ ಕಿಚ್ಚು ಹೊತ್ತಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಕಂಬಳ ಪರ ಅಭಿಯಾನ ಈಗ ಪ್ರತಿಭಟನಾ ಹಂತಕ್ಕೆ ತಲುಪಿದೆ. ಮುಂದಿನ ಶನಿವಾರ ದೊಡ್ಡ ಮಟ್ಟದ ಹೋರಾಟಕ್ಕೂ ವೇದಿಕೆ ಸಜ್ಜಾಗಿದೆ.

ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಾಯ್ತು.

ಜನವರಿ 24ರಂದು ಕಂಬಳ ಕುರಿತು ಕೋರ್ಟ್​ ತೀರ್ಪು ಹೊರ ಬೀಳಲಿದೆ. ಅಂದು ತೀರ್ಪು ಪರವಾಗಿ ಬಂದರೆ ಶನಿವಾರ ಕೋಟಿ ಚಿನ್ನಯ ಜೋಡುಕೆರೆ ಕಂಬಳ ನಡೆಸಿ ಸಂಭ್ರಮಾಚರಣೆ ಮಾಡಲಾಗುವುದು. ತೀರ್ಪು ವಿರುದ್ಧವಾಗಿ ಬಂದರೆ ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಶನಿವಾರದ ಹೋರಾಟದಲ್ಲಿ 250 ಕೋಣ, 25 ಸಾವಿರ ಪ್ರತಿಭಟನಾಕಾರರು ಸೇರುವ ನಿರೀಕ್ಷೆಯಿದೆ. ಇನ್ನೂ ಸರ್ಕಾರ ಕೂಡ ಹೈಕೋರ್ಟಿನ ತೀರ್ಪಿಗೆ ಕಾಯುತ್ತಿದೆ. ಅಗತ್ಯ ಬಿದ್ದರೆ ಸಂಪುಟ ಸಭೆ ಸೇರಿ ಸುಗ್ರೀವಾಜ್ಞೆಗೆ ಪ್ರಸ್ತಾವನೆ ಕಳಿಸುತ್ತೇವೆ ಎಂದು ಸರ್ಕಾರಿ ಮುಖ್ಯ ಸಚೇತಕ ಐವಾನ್ ಡಿಸೋಜ ಹೇಳಿದ್ದಾರೆ.