ಪ್ರತಿಭಟನೆಗೆ ಅನುಮತಿ ಪಡೆದಿಲ್ಲ  ಎಂಬ ಕಾರಣಕ್ಕೆ  ಪ್ರತಿಭಟನಾಕಾರರನ್ನು  ಪೊಲೀಸರು ತೆರವುಗೊಳ್ಳಿಸಿದ್ದಾರೆ. 

ಬೆಂಗಳೂರು (ಜ.22): ಜಲ್ಲಿಕಟ್ಟಿಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ, ಕಂಬಳ ಆಚರಣೆಗಾಗಿ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರತಿಭಟನಲ್ಲಿ ಕಂಬಳ ಆಚರಣೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳ್ಳಿಸಿದ್ದಾರೆ. 

ಮೊದಲು ಹಲಸೂರು ಕೆರೆ ಬಳಿ ಪ್ರತಿಭಟನೆಗೆ ಅನುಮತಿ ಪಡೆಯಲಾಗಿತ್ತು. ಆದರೆ ಅಲ್ಲಿ ಜಲ್ಲಿಕಟ್ಟು ಹೋರಾಟಗಾರರಿಗೆ ಅನುಮತಿ ನೀಡಲಾಗಿತ್ತು. ಹಾಗಾಗೀ ಫ್ರೀಡಮ್ ಪಾರ್ಕ್’ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು.