ಕಮಲ್ ಹೊಸ ಪಕ್ಷಕ್ಕೆ ಡೇಟ್ ಫಿಕ್ಸ್

First Published 18, Jan 2018, 12:08 PM IST
Kamal Hassan New Party will Launch Feb 21
Highlights

ತಮಿಳುನಾಡಿನ ಜನರಿಗೆ ಪರ್ಯಾಯ ರಾಜಕೀಯ ಆಯ್ಕೆ ನೀಡುವ ಸಲುವಾಗಿ ಹೊಸ ಪಕ್ಷ ಕಟ್ಟುವುದಾಗಿ ಈಗಾಗಲೇ ಘೋಷಿಸಿರುವ ಪ್ರಸಿದ್ಧ ಚಿತ್ರನಟ ಕಮಲ್ ಹಾಸನ್, ತಮ್ಮ ಪಕ್ಷದ ಹೆಸರನ್ನು ಫೆ.21 ರಂದು ಘೋಷಣೆ ಮಾಡಲಿದ್ದಾರೆ.

ಚೆನ್ನೈ(ಜ.18): ತಮಿಳುನಾಡಿನ ಜನರಿಗೆ ಪರ್ಯಾಯ ರಾಜಕೀಯ ಆಯ್ಕೆ ನೀಡುವ ಸಲುವಾಗಿ ಹೊಸ ಪಕ್ಷ ಕಟ್ಟುವುದಾಗಿ ಈಗಾಗಲೇ ಘೋಷಿಸಿರುವ ಪ್ರಸಿದ್ಧ ಚಿತ್ರನಟ ಕಮಲ್ ಹಾಸನ್, ತಮ್ಮ ಪಕ್ಷದ ಹೆಸರನ್ನು ಫೆ.21 ರಂದು ಘೋಷಣೆ ಮಾಡಲಿದ್ದಾರೆ.

ತಮಿಳುನಾಡಿನ ತಮ್ಮ ತವರು ಜಿಲ್ಲೆ ರಾಮನಾಥಪುರದಲ್ಲಿ ಪಕ್ಷದ ಹೆಸರು ಘೋಷಣೆ ಮಾಡಲಿರುವ ಕಮಲ್ ಅವರು, ಅಂದೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಕಮಲ್ ಅವರ ಈ ಪ್ರವಾಸ ಹಂತಗಳಲ್ಲಿ ನಡೆಯಲಿದೆ.

ರಾಮನಾಥಪುರದಿಂದ ಆರಂಭವಾಗಿ ಮದುರೈ, ದಿಂಡಿಗಲ್ ಹಾಗೂ ಶಿವಗಂಗೆ ತಲುಪಲಿದೆ. ತನ್ಮೂಲಕ ಕಮಲ್ ಹಾಸನ್ ಅವರು ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಂತೆ ಆಗುತ್ತದೆ. ಕೆಲವು ಸಮಯದಿಂದ ತಮಿಳುನಾಡಿನ ರಾಜಕಾರಣವನ್ನು ಯಥಾಸ್ಥಿತಿ ಕಾಡುತ್ತಿದೆ. ಅದಕ್ಕೆ ಸವಾಲು ಒಡ್ಡುವ ಉದ್ದೇಶ ತಮ್ಮದಾಗಿದೆ ಎಂದು ಕಮಲ್ ತಿಳಿಸಿದ್ದಾರೆ.

 

loader