ಬಿಗ್‌ಬಾಸ್ ಶೋದಲ್ಲಿ, ನಿಯಮ ಮೀರಿದ ಸ್ಪರ್ಧಾಳುಗಳಿಗೆ ಅಗೋಚರ ಬಿಸ್ ಬಾಸ್ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ ತಮಿಳು ಆವೃತ್ತಿಯಲ್ಲಿ, ಬಿಗ್‌ಬಾಸ್‌ಗೇ ಕಾರ್ಯಕ್ರಮದ ನಿರ್ವಾಹಕ, ನಟ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.

ಚೆನ್ನೈ(ಆ.07): ಬಿಗ್‌ಬಾಸ್ ಶೋದಲ್ಲಿ, ನಿಯಮ ಮೀರಿದ ಸ್ಪರ್ಧಾಳುಗಳಿಗೆ ಅಗೋಚರ ಬಿಸ್ ಬಾಸ್ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ ತಮಿಳು ಆವೃತ್ತಿಯಲ್ಲಿ, ಬಿಗ್‌ಬಾಸ್‌ಗೇ ಕಾರ್ಯಕ್ರಮದ ನಿರ್ವಾಹಕ, ನಟ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಸ್ಪರ್ಧಾಳುಗಳಿಗೆ ವಿಕಲಾಂಗರ ರೀತಿ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನೊಮ್ಮೆ ಇಂತಹ ಸಂವೇದನಾರಹಿತ ಟಾಸ್ಕ್ ನೀಡಿದರೆ ತಕ್ಷಣವೇ ಶೋದಿಂದ ಹೊರಗೆಹೋಗುವುದಾಗಿ ಬಿಗ್ ಬಾಸ್‌'ಗೆ ಕಮಲ್ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ.