ಟ್ವೀಟ್ ಮಾಡಿರುವ ಅವರು, ‘‘ನನ್ನೆಲ್ಲ ಗೆಳೆಯರು ಹಾಗೂ ಅಭಿಮಾನಿಗಳಿಗೆ ಒಂದು ಮನವಿ. ಸಿಎಂ ಜಯಲಲಿತಾ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ದಯವಿಟ್ಟು ನನ್ನ ಬರ್ತ್ಡೇ ಕಾರ್ಯಕ್ರಮಗಳನ್ನು ಮಾಡಬೇಡಿ,’’ ಎಂದಿದ್ದಾರೆ. ನ.7ರಂದು ಕಮಲ್ ಅವರು ತಮ್ಮ 63ನೇ ವಸಂತಕ್ಕೆ ಕಾಲಿರಿಸಲಿದ್ದಾರೆ.

ಚೆನ್ನೈ(ಅ.24): ತಮಿಳುನಾಡು ಸಿಎಂ ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿರುವ ಹಿನ್ನೆಲೆಯಲ್ಲಿ ನ.7ರಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಂತೆ ನಟ ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈ ಕುರಿತು ತಮಿಳಿನಲ್ಲಿ ಟ್ವೀಟ್ ಮಾಡಿರುವ ಅವರು, ‘‘ನನ್ನೆಲ್ಲ ಗೆಳೆಯರು ಹಾಗೂ ಅಭಿಮಾನಿಗಳಿಗೆ ಒಂದು ಮನವಿ. ಸಿಎಂ ಜಯಲಲಿತಾ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ದಯವಿಟ್ಟು ನನ್ನ ಬರ್ತ್ಡೇ ಕಾರ್ಯಕ್ರಮಗಳನ್ನು ಮಾಡಬೇಡಿ,’’ ಎಂದಿದ್ದಾರೆ. ನ.7ರಂದು ಕಮಲ್ ಅವರು ತಮ್ಮ 63ನೇ ವಸಂತಕ್ಕೆ ಕಾಲಿರಿಸಲಿದ್ದಾರೆ.

ಆಸ್ಪತ್ರೆಗೆ ಚಾಂಡಿ ಭೇಟಿ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಭಾನುವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಜಯಲಲಿತಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ‘‘ಜಯಾ ಅವರ ಆರೋಗ್ಯದ ಕುರಿತು ಆಸ್ಪತ್ರೆಯಿಂದ ಸಕಾರಾತ್ಮಕ ಮಾಹಿತಿ ಸಿಕ್ಕಿದೆ. ವೈದ್ಯರು ಎಲ್ಲವನ್ನೂ ವಿವರಿಸಿದ್ದಾರೆ. ಜಯಾ ಚೇತರಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ,’’ ಎಂದಿದ್ದಾರೆ ಚಾಂಡಿ. ಸಿಂಗಾಪುರದ ಅಕಾರಿ ಜೋಶುವಾ, ತಮಿಳು ನಟಿ ಲತಾ ಸೇರಿದಂತೆ ಹಲವು ಗಣ್ಯರು ಭಾನುವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.