ಸೂಪರ್’ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡುವ ದಿನ ಖಚಿತವಾಗಿದೆ. ನ. 07 ರಂದು ತಮ್ಮ 63 ನೇ ಹುಟ್ಟು ಹಬ್ಬದ ದಿನದಂದು ಹೊಸ ಪಕ್ಷವನ್ನು ಶುರು ಮಾಡಲಿದ್ದಾರೆ.
ನವದೆಹಲಿ (ಅ.04): ಸೂಪರ್’ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡುವ ದಿನ ಖಚಿತವಾಗಿದೆ. ನ. 07 ರಂದು ತಮ್ಮ 63 ನೇ ಹುಟ್ಟು ಹಬ್ಬದ ದಿನದಂದು ಹೊಸ ಪಕ್ಷವನ್ನು ಶುರು ಮಾಡಲಿದ್ದಾರೆ.
ಕಮಲ್ ಹಾಸನ್ ತಮ್ಮ ಅಭಿಮಾನಿಗಳನ್ನು ಇಂದು ಭೇಟಿ ಮಾಡು ನೂತನ ಪಕ್ಷದ ರೂಪುರೇಶೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗಿರುವ ಯಾವುದೇ ರಾಜಕೀಯ ಪಕ್ಷಗಳು ನನ್ನ ತತ್ವ ಸಿದ್ದಾಂತಗಳನ್ನು ಪ್ರತಿನಿಧಿಸುತ್ತಿಲ್ಲ. ತಮಿಳುನಾಡಿನಲ್ಲಿರುವ ಎಲ್ಲಾ ಪಕ್ಷಗಳು ಭ್ರಷ್ಟಪಕ್ಷಗಳು. ತಮಿಳುನಾಡನ್ನು ಭ್ರಷ್ಟಾಚಾರದಿಂದ ಹೊರ ತರಬೇಕು. ಹಾಗಾಗಿ ನಾನೇ ಒಂದು ಹೊಸ ಪಕ್ಷವನ್ನು ಸ್ಥಾಪಿಸುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
