ಹಸುವಿನ ಮಾಂಸ ತಿನ್ನುವವರು ನಿಮ್ಮ ತಾಯಿಯ ಮಾಂಸವನ್ನೂ ತಿನ್ನುವಿರಿ : ಕಲ್ಲಡ್ಕ ಪ್ರಭಾಕರ್ ಭಟ್

First Published 26, Feb 2018, 7:17 AM IST
Kalladka Prabhakar Bhat  News
Highlights

ಕಲ್ಲಡ್ಕ ಪ್ರಭಾಕರ್ ಭಟ್ ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. 

ಬೆಂಗಳೂರು : ಕಲ್ಲಡ್ಕ ಪ್ರಭಾಕರ್ ಭಟ್ ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.  ಲವ್ ಜಿಹಾದ್ ಹಾಗೂ ಹಸುಗಳನ್ನು ಹತ್ಯೆ ಮಾಡುವುದನ್ನು ನಮ್ಮ ಕಾರ್ಯಕರ್ತರು ತಡೆದಾಗ ಬುದ್ದಿ ಜೀವಿಗಳು ಅದನ್ನು ಕೋಮು ವಾದಿಗಳು ಎಂದು ಹೇಳುತ್ತಾರೆ. ಮುಖ್ಯಮಂತ್ರಿಗಳು ತಾವು ಸರ್ಕಲ್’ನಲ್ಲಿ ನಿಂತು ಹಸುವಿನ ಮಾಂಸ ಸೇವಿಸುತ್ತೇನೆ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ.

ತಿನ್ನಿ ಸ್ವಾಮಿ ನೀವು ನಿಮ್ಮ ಅಮ್ಮನ ಮಾಂಸವನ್ನೂ ತಿನ್ನುವಿರಿ ಎಂದು ಎಂದು ಹೇಳಿದ್ದಾರೆ. ಕೆಲವರು ಕಾಲು ಮಡಚಿಕೊಂಡು ಅಲ್ಲಾ ಎಂದರೆ ಇನ್ನು ಕೆಲವರು ಏಸು ಎಂದು ಕೂಗುತ್ತಾರೆ. ಹಾಗಾದರೆ ಆ ದಿನ ದೇವರು ಇರುವುದಿಲ್ಲವೇ ಎಂದಿದ್ದಾರೆ. ಮುಖ್ಯಮಂತ್ರಿಗಳೇ ನೀವು ಹಿಂದೂ ಆಗಿದ್ದು ಹಿಂದೂ ಆಗಿಯೇ ಇರಿ.

ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳ ಅನ್ನವನ್ನೂ ಮುಖ್ಯಮಂತ್ರಿಗಳು ಕಸಿದುಕೊಂಡರು.ಇನ್ನು ನಮಗೂ ರಮಾನಾಥ್ ರೈ ಗೂ ಜಗಳವಿದೆ ಎಂದು ಹೇಳುತ್ತಾರೆ. ನಮ್ಮ ನಡುವೆ ಯಾವುದೇ ಜಗಳವಿಲ್ಲ. ಅಲ್ಲದೇ ರೈ ಆಸ್ತಿಗೂ ನಾವು ಕೈ ಹಾಕುವುದಿಲ್ಲ. ನಮ್ಮ ಬಳಿ ಆಸ್ತಿಯೂ ಇಲ್ಲ ಎಂದಿದ್ದಾರೆ.

ಅಲ್ಲದೇ ಪ್ರಪಂಚದೆಲ್ಲಿ ಎಲ್ಲಕ್ಕಿಂತಲೂ ಹಿಂದುತ್ವ ಮೇಲಿನದ್ದಾಗಿದೆ. ಓರ್ವ ಬುದ್ದಿ ಜೀವಿ ದೇವರ ಮೂರ್ತಿಗಳ ಮೇಲೆ ಮೂತ್ರ ಮಾಡಿ ಎಂದು ಹೇಳಿದ, ಆದರೆ ಕೊನೆಗೆ ಆತ ಮೂತ್ರ ಬರದೇ ಸಾವನ್ನಪ್ಪಿದ ಎಂದು ಹೇಳಿದ್ದಾರೆ.

loader