ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ರಾಜ್ಯ  ಸರ್ಕಾರದ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದಾರೆ.  

ಮಂಗಳೂರು (ಜ.04): ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಸಿದ್ದರಾಮಯ್ಯ ಕೊಲೆಗಳ ಸರದಾರ. ಕೊಲೆಯಿಂದ ನಮ್ಮ ಭಾವನೆಗಳ‌ನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಇದು ಅಮಾಯಕನ ಹತ್ಯೆ, ಹಿಂದೂ ಸಂಸ್ಕಾರದಂತೆ ಅಂತಿಮ ಯಾತ್ರೆಗೂ ಬಿಟ್ಟಿಲ್ಲ. ಶವದ ಮೆರವಣಿಗೆ ಮಾಡಿದರೆ ಏನು ತಪ್ಪು? ಸಚಿವರು ಅಲ್ಲಾಹುನ ಕೃಪೆಯಿಂದ ಗೆದ್ದೆ ಅಂತಾರೆ ಅವರಿಗೆ ಅವರ ಹೆಂಡ್ತಿ ಮಕ್ಕಳು ಓಟ್ ಹಾಕಿಲ್ವಾ ? ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದೂ ಸಮಾಜ ಹೇಡಿ ಅಲ್ಲ, ಧೈರ್ಯವಂತರ ಸಮಾಜ. ಹಿಂದೂಗಳು ಎಂದೂ ಹೇಡಿ ಆಗಲ್ಲ. ಹೋರಾಟ ಇಲ್ಲಿಗೆ ಬಿಡಲ್ಲ, ಹೇಡಿಗಳಾಗಿ ಓಡಲ್ಲ. ಧರ್ಮ ಯುದ್ಧಕ್ಕೆ ರಾಮ ಪ್ರೇರಣೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ. ರಾಜ್ಯದಲ್ಲಿ ಪಿಎಫ್'ಐನ ಮಟ್ಟ ಹಾಕಿ ಎಂದು ಹೇಳಿದ್ದಾರೆ.