Asianet Suvarna News Asianet Suvarna News

ಜನಸಂಘವನ್ನು ಹಾಡಿ ಹೊಗಳಿದ ಕಲ್ಲಡ್ಕ ಪ್ರಭಾಕರ್ ಭಟ್

ದೇಶಕ್ಕಾಗಿ ಸಾಯುವುದಲ್ಲ. ದೇಶಕ್ಕಾಗಿ ಬದುಕಬೇಕು ಎಂದು ಸಂಘ ನಮಗೆ ಹೇಳಿಕೊಟ್ಟಿದೆ.  1947 ರಲ್ಲಿ ಸ್ವಾತಂತ್ರ್ಯ ಬಂದರೂ ಆಗ ದೇಶವನ್ನು ಒಡೆದರು. ಅದಕ್ಕೆ ಅಂದು ನಮಗೆ ವಿಜಯದಿವಸ ಅಲ್ಲ. ಆದರೆ ತುರ್ತು ಪರಿಸ್ಥಿತಿ ವಾಪಸ್ ಪಡೆದ ದಿನ‌ ದೇಶ ಒಂದುಗೂಡಿತು. ಹಾಗಾಗಿ ನಾವು ಮಾರ್ಚ್  21ನ್ನು ವಿಜಯ ದಿವಸ ಎಂದು ಆಚರಿಸುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. 

Kalladka Prabhakar Bhat Admires Jana Sangha

ಮಂಗಳೂರು (ಮಾ. 21): ದೇಶಕ್ಕಾಗಿ ಸಾಯುವುದಲ್ಲ. ದೇಶಕ್ಕಾಗಿ ಬದುಕಬೇಕು ಎಂದು ಸಂಘ ನಮಗೆ ಹೇಳಿಕೊಟ್ಟಿದೆ.  1947 ರಲ್ಲಿ ಸ್ವಾತಂತ್ರ್ಯ ಬಂದರೂ ಆಗ ದೇಶವನ್ನು ಒಡೆದರು. ಅದಕ್ಕೆ ಅಂದು ನಮಗೆ ವಿಜಯದಿವಸ ಅಲ್ಲ.
ಆದರೆ ತುರ್ತು ಪರಿಸ್ಥಿತಿ ವಾಪಸ್ ಪಡೆದ ದಿನ‌ ದೇಶ ಒಂದುಗೂಡಿತು. ಹಾಗಾಗಿ ನಾವು ಮಾರ್ಚ್  21 ನ್ನು ವಿಜಯ ದಿವಸ ಎಂದು ಆಚರಿಸುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. 

ಕಳೆದ 93 ವರ್ಷಗಳಿಂದ ಜನಸಂಘ ಕೆಲಸ ಮಾಡುತ್ತಿದೆ. ಅಂದು ದೇಶ ವಿಭಜನೆ ತಡೆಯುವಷ್ಟು ಶಕ್ತಿ ಸಂಘಕ್ಕೆ ಇರಲಿಲ್ಲ.  ಸಂಘದ ಮೇಲೆ ನಿಷೇಧ  ಹೇರುವ ಪ್ರಯತ್ನ ಕಾಂಗ್ರೆಸ್ ಮಾಡಿತು.  ಕಾರಣ ಕಾಂಗ್ರೆಸ್'ಗಿಂತ ಹೆಚ್ಚು ಗಟ್ಟಿಯಾಗಿ ಸಂಘ ಬೆಳೆಯುತ್ತಿತ್ತು.   ಅದೇ ಸಮಯದಲ್ಲಿ ಮಹಾತ್ಮ ಗಾಂಧಿ ಹತ್ಯೆ ಆಯಿತು.  ಅದನ್ನ ಸಂಘದ ಮೇಲೆ ಹಾಕಲಾಯಿತು.  ಇಡಿ ದೇಶ ಸಂಘದ ವಿರುದ್ಧ ತಿರುಗಿತು.  ಸಂಘ ಏಕಾಂಗಿ ಆಯಿತು.  77 ಸಾವಿರ ಸ್ವಯಂ ಸೇವಕರ ಬಂಧನ ಆಯಿತು ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ. 

Follow Us:
Download App:
  • android
  • ios