ಹೌದು,ಇಂದಿಗೂ ಕೇರಳದ ಸಮರ ವೀರರು, ನಮ್ಮ ಕರಾವಳಿಯ ಈ ಗರಡಿಗೆ ಬಂದು ಕೈ ಮುಗಿದು ಹೋಗ್ತಾರೆ. ಮೈ ಕಂಪಿಸುವಂತೆ ಮಾಡುವ ಪಟ್ಟುಗಳು, ಹಾವಿನಂತೆ ಸುರುಳಿ ಸುತ್ತಿ ಮೇಲೆದ್ದು ನೆಲಕ್ಕುರುಳಿ ಬೀಳುತ್ತಲೇ ಮತ್ತೆ ಪುಟಿದೇಳಿ ,ಎದುರಾಳಿಯನ್ನು ಸೆಣೆಸಲು ಮುಗಿಬೀಳುವ ಪರಿ, ಹೇಗೆ ಬೇಕಾದರೂ ತಿರುಚಬಲ್ಲ ಸಲೀಸಾದ ಕಾಯ.ಇವೆಲ್ಲ ಕಳರಿಪಯಟ್ಟು ವಿದ್ಯೆ ಕರಗತ ಮಾಡಿಕೊಂಡವರ ವರಸೆಗಳು.
ಉಡುಪಿ(ಜೂ.07): ಇದೊಂದು ಕೇರಳದ ಪುರಾತನ ಸಮರ ಕಲೆ ‘ಕಳಾರಿ ಪಯ್ಯಟ್’. ಈ ಜಗತ್ ಪ್ರಸಿದ್ಧ ಯುದ್ದ ಕಲೆ ಹುಟ್ಟಿದ್ದು ನಮ್ಮ ಕನ್ನಡದ ನೆಲದಲ್ಲಿಯೇ..?
ಹೌದು,ಇಂದಿಗೂ ಕೇರಳದ ಸಮರ ವೀರರು, ನಮ್ಮ ಕರಾವಳಿಯ ಈ ಗರಡಿಗೆ ಬಂದು ಕೈ ಮುಗಿದು ಹೋಗ್ತಾರೆ. ಮೈ ಕಂಪಿಸುವಂತೆ ಮಾಡುವ ಪಟ್ಟುಗಳು, ಹಾವಿನಂತೆ ಸುರುಳಿ ಸುತ್ತಿ ಮೇಲೆದ್ದು ನೆಲಕ್ಕುರುಳಿ ಬೀಳುತ್ತಲೇ ಮತ್ತೆ ಪುಟಿದೇಳಿ ,ಎದುರಾಳಿಯನ್ನು ಸೆಣೆಸಲು ಮುಗಿಬೀಳುವ ಪರಿ, ಹೇಗೆ ಬೇಕಾದರೂ ತಿರುಚಬಲ್ಲ ಸಲೀಸಾದ ಕಾಯ.ಇವೆಲ್ಲ ಕಳರಿಪಯಟ್ಟು ವಿದ್ಯೆ ಕರಗತ ಮಾಡಿಕೊಂಡವರ ವರಸೆಗಳು.
ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ದೇವರ ಈ ಗರಡಿ ಮನೆಯೇ ಕಳಾರಿಪಯ್ಯಟ್ ಗೆ ಮೂಲ ಕಳಾರಿ ಪಯ್ಯಟ್ ಗೂ ನಮ್ಮ ಕರ್ನಾಟಕ ಕರಾವಳಿಗೂ ಅವಿನಾಭಾವ ಸಂಬಂಧವಿದೆ. ವಿಜಯನಗರ ಅರಸರ ಕಾಲದಲ್ಲೂ ಈ ಗರಡಿಮನೆಯಲ್ಲೇ ಯೋಧರಿಗೆ ತರಬೇತಿ ನೀಡಲಾಗುತ್ತಿತ್ತು. ತಿರುವಾಂಕೂರಿನ ಅರಸರಿಗೂ ಇಲ್ಲೇ ಯುದ್ಧಾಭ್ಯಾಸ ನಡೆದದ್ದು.ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ್ಯರು 12 ವರ್ಷಗಳ ಕಾಲ ಈ ಗರಡಿಯಲ್ಲೇ ಪಳದ್ದು. ಈ ಕ್ಷೇತ್ರದ ಪ್ರಸಿದ್ಧಿಗೆ ಕಾರಣ.
ಈ ಅಪರೂಪದ ಗರಡಿ ಮನೆಯನ್ನು ‘ನಾನಯ’ ಮನೆತನದವರು ಒಂದು ಕಾಲು ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಿದ್ದಾರೆ. ಈ ಆಧುನಿಕ ಕಾಲ ಘಟ್ಟದಲ್ಲಿ ಸಮರಕಲೆ ದೂರ ಸರಿದು ಗರಡಿಗಳು ಆರಾಧನಾ ಸ್ಥಾನವಾಗಿ ಉಳಿದಿವೆ. ಕೇರಳದಲ್ಲಿ ಕಳಾರಿ ಪಯ್ಯಟ್ ಬೆಳೆಯಿತು. ಆದರೆ ಇಲ್ಲಿ ಗರಡಿಮನೆಗಳು ಪೂಜಾಸ್ಥಾನವಾಗಿ ಮಾತ್ರ ಉಳಿದಿವೆ.
ವರದಿ: ಶಶಿಧರ್ ಮಾಸ್ತಿಬೈಲು, ಸುವರ್ಣ ನ್ಯೂಸ್