ಪ್ರತಿಭಟನೆ ನಡೆಸುವಾಗ ಬೆಂಕಿ ಹಚ್ಚುವುದು, ಬ್ಯಾರಿಕೇಡ್ ಮುರಿಯುವುದು ಸರ್ವೇ ಸಾಮಾನ್ಯ. ಪ್ರತಿಭನಾಕಾರರು ಹಚ್ಚಿದ ಬೆಂಕಿ ನಂದಿಸಲು ಹೋದ ಪೊಲೀಸ್ ಪೇದೆಯೊಬ್ಬರಿಗೆ ಬೆಂಕಿ ತಗುಲಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಲಬುರಗಿ ಜೂನ್ 15:ಪ್ರತಿಭಟನೆ ನಡೆಸುವಾಗ ಬೆಂಕಿ ಹಚ್ಚುವುದು, ಬ್ಯಾರಿಕೇಡ್ ಮುರಿಯುವುದು ಸರ್ವೇ ಸಾಮಾನ್ಯ. ಪ್ರತಿಭನಾಕಾರರು ಹಚ್ಚಿದ ಬೆಂಕಿ ನಂದಿಸಲು ಹೋದ ಪೊಲೀಸ್ ಪೇದೆಯೊಬ್ಬರಿಗೆ ಬೆಂಕಿ ತಗುಲಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಾದಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೇದೆಗೆ ಅಪಾಯ ಎದುರಾಗಿತ್ತು. ಮಾದಿಗ ಸಮನ್ವಯ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಿಯಂತ್ರಣಕ್ಕೆ ಧಾವಿಸಿದ ಪೊಲೀಸ್ ಪೇದೆಗೆ ಬೆಂಕಿ ತಗಲುವುದರಲ್ಲಿತ್ತು.
ಬೆಂಕಿ ಹೊತ್ತಿಕೊಳ್ಳಲುಮ ಏನು ಕಾರಣ? ಟೈರ್ ಗೆ ಹಾಕಿದ್ದ ಬೆಂಕಿ ಜೋರಾಗಿ ಗಾಳಿ ಬೀಸಿದ್ದರಿಂದ ಹರಡಲು ಆರಂಭಿಸಿದೆ. ಹತ್ತಿರದಲ್ಲಿಯೇ ಇದ್ದ ಪೊಲೀಸ್ ಪೇದೆ ಬೆಂಕಿಗೆ ಆಹುತಿಯಾಗುವ ಅಪಾಯ ಎದುರಾಗಿದೆ. ತಕ್ಷಣ ಪ್ರತಿಭಟನಾಕಾರು ಬೆಂಕಿ ನಂದಿಸಿದ ಪರಿಣಾಮ ಭಾರಿ ಅನಾಹುತ ತಪ್ಪಿದೆ.

Last Updated 15, Jun 2018, 6:06 PM IST