ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಎಎಸ್ಐ ಅಧಿಕಾರಿ

First Published 7, Apr 2018, 12:55 PM IST
Kalaburagi ASI Death
Highlights

ಕರ್ತವ್ಯದಲ್ಲಿದ್ದ ಎಎಸ್’ಐ ಅಧಿಕಾರಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಲಬುರಗಿ : ಕರ್ತವ್ಯದಲ್ಲಿದ್ದ ಎಎಸ್’ಐ ಅಧಿಕಾರಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಂಬಾರಾಯ್ ಪಾಟೀಲ್ (57) ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಟಕಲ್ ಪೊಲೀಸ್ ಠಾಣೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದರು.

ರಾತ್ರಿ ಠಾಣೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು.  ಪಕ್ಕದ ಕ್ವಾಟ್ರಸ್’ಗೆ ತೆರಳುತ್ತಿದ್ದಂತೆ ಎದೆನೋವು ಉಲ್ಬಣಗೊಂಡಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

loader