ಫೇಸ್‌ಬುಕ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಾಲ ಚಿತ್ರ ಲೀಕ್

Kala movie leaked in Facebook
Highlights

ಕಾಲ ಚಿತ್ರ ತಂಡಕ್ಕೆ ಮತ್ತೊಂದು ಹೊಡೆತ. ಫೇಸ್‌ಬುಕ್‌ನಲ್ಲಿ ಕಾಲ ಚಿತ್ರ ಲೀಕ್ ಆಗಿದೆ. ಬಿಡುಗಡೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡ ಚಿತ್ರತಂಡಕ್ಕೆ ದಿಢೀರ್ ತಲೆ ನೋವು ಶುರುವಾಗಿದೆ. ಫೇಸ್‌ಬುಕ್ ಪೇಜ್‌ನಲ್ಲಿ ಕಾಲ ಚಿತ್ರ ಲೈವ್ ಮಾಡಿದಾದ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಸಿಂಗಾಪುರ(ಜೂನ್.6): ಹಲವು ಅಡೆತಡೆಗಳನ್ನ ಎದುರಿಸಿದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಲ ಚಿತ್ರ ಇನ್ನೇನು ಬಿಡುಗಡೆಯಾಗ ಬೇಕು ಅನ್ನುವಷ್ಟರಲ್ಲೇ ಮತ್ತೊಂದು ಆಘಾತ ಎದುರಿಸಿದೆ. ಈಗಾಗಲೇ ಚಿತ್ರದ ಕೆಲ ತುಣುಕುಗಳು ಅಂತರ್ಜಾಲ ತಾಣಗಳಲ್ಲಿ ಲೀಕ್ ಆಗಿತ್ತು. ಇದೀಗ ಫೇಸ್‌ಬುಕ್‌ನಲ್ಲಿ ಪೇಜ್‌ನಲ್ಲಿ ಸಂಪೂರ್ಣ ಚಿತ್ರ ಲೀಕ್ ಆಗಿದೆ. 

ಸಿಂಗಾಪುರದಲ್ಲಿ ಕಾಲ ಚಿತ್ರದ ಪ್ರೀಮಿಯರ್ ಶೋ ಇಂದು ನಡೆದಿದೆ. ಶೋನಲ್ಲಿದ್ದ ಪ್ರವೀಣ್ ಎಂಬಾತ ಕಾಲ ಚಿತ್ರವನ್ನ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ನೀಡಿದ್ದಾನೆ. ಚಿತ್ರ ಆರಂಭದಿಂದಲೂ ಲೈವ್ ನೀಡಿದ್ದ ಪ್ರವೀಣ್ ಬಹುತೇಕ ಚಿತ್ರವನ್ನ ಹರಿಬಿಟ್ಟಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ಕಾಲ ಚಿತ್ರ ನಿರ್ಮಾಪಕ ದನಂಜಯ್ ಟ್ವೀಟ್ ಮೂಲಕ ಕಾಲ ಚಿತ್ರ ಲೀಕ್ ಆಗಿರೋದನ್ನ ಬಹಿರಂಗ ಪಡಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಲೈವ್ ನೀಡಿದ್ದ ಪ್ರವೀಣ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ. 

loader