ಕಳೆದ ಐವತ್ತು ವರ್ಷಗಳಿಂದ ಲೋಹಿಯಾ ತತ್ವ ಸಿದ್ಧಾಂತದಡಿಯಲ್ಲಿ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಬೆಳೆದು, ಗೇಣಿ ರೈತರಿಗೆ ಭೂ ಒಡೆತನವನ್ನು ಕೊಡಿಸುವ ಕಾಗೋಡು ಚಳುವಳಿಯ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಅಲ್ಲದೇ ಈ ವರೆಗೂ ಒಂದೇ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ ಎಂದು ಕಾಗೋಡು ಹೇಳಿದರು.

ರಿಪ್ಪನ್‌'ಪೇಟೆ(ಡಿ.03): ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಆಕಾಂಕ್ಷಿಯಾಗಿದ್ದೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಗ್ರಾಮ ಪಂಚಾಯತ್ ವಿಕಾಸಸೌಧದಲ್ಲಿ 94 ಸಿ ಹಕ್ಕುಪತ್ರ ವಿತರಣಾ ಸಮಾರಂಭದ ನಂತರ ಮಾತನಾಡಿ, ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗಿದ್ದು ಸಾಕಷ್ಟು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರದಿಂದ ಹಣವನ್ನು ತರಲಾಗಿದೆ ಎಂದರು.

ಕಳೆದ ಐವತ್ತು ವರ್ಷಗಳಿಂದ ಲೋಹಿಯಾ ತತ್ವ ಸಿದ್ಧಾಂತದಡಿಯಲ್ಲಿ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಬೆಳೆದು, ಗೇಣಿ ರೈತರಿಗೆ ಭೂ ಒಡೆತನವನ್ನು ಕೊಡಿಸುವ ಕಾಗೋಡು ಚಳುವಳಿಯ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಅಲ್ಲದೇ ಈ ವರೆಗೂ ಒಂದೇ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ ಎಂದು ಕಾಗೋಡು ಹೇಳಿದರು.

ನನ್ನ ಕೊನೆ ಉಸಿರಿರುವವರೆಗೂ ನಮ್ಮ ಜನ್ಮ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸ್ವಂತ ಸೂರು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವ ಜನರಿಗೆ ಸೂರು ಮತ್ತು ನಾಡಿಗೆ ಬೆಳಕು ನೀಡುವ ಮಹಾದಾಸೆ ನನ್ನದಾಗಿದ್ದು ಅದನ್ನು ಕೊಡಿಸಿ ಬಡಜನರ ಸೇವೆಯಲ್ಲಿ ದೇವರನ್ನು ಕಾಣಬೇಕು ಎಂಬ ಉದ್ದೇಶದಿಂದ ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಲು ಬಯಸಿದ್ದೇನೆ ಎಂದು ಹೇಳಿದರು.