ಕುರುಬ ಸಮಾಜದ ಸಭೆಯಲ್ಲಿ ಕಾಗಿನೆಲೆ ಶಾಖಾ ಮಠದ ನಿರಂಜನಾನಂದಪುರಿ ಸ್ವಾಮೀಜಿ ಆಡಿದ್ದ ಅವಾಚ್ಯ ಮಾತುಗಳನ್ನು ಧ್ವನಿ ಮುದ್ರಿಸಿ, ಮಾಧ್ಯಮಕ್ಕೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀಗಳು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಇದರ ಬೆನ್ನಲ್ಲೇ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಜೂನ್ 2ರಂದು ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ಕಾಗಿನೆಲೆ ಪೀಠದ ಶಾಖಾ ಮಠದಲ್ಲಿ ನಾಲ್ಕು ಗೋಡೆ ಮಧ್ಯೆ ನಡೆದ ಕುರುಬ ಸಮಾಜದ ಸಮಸ್ಯೆ, ಮಠದ ಕಾರ್ಯಗಳ ಕುರಿತ ಸಭೆಯಲ್ಲಿ ಆದ ಚರ್ಚೆ ವಿಚಾರವನ್ನು ಕಾಣದ ಕೈಗಳು ಧ್ವನಿ ಮುದ್ರಿಸಿಕೊಂಡು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದು ನಿಜಕ್ಕೂ ಬೇಸರ ತಂದಿದೆ.
ಇದರಿಂದ ತಾವು ಮನ ನೊಂದು ವಿಷಾದಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
