ಬೆಂಗಳೂರು[ಜು.18] : ಈಗಾಗಲೇ ಅತೃಪ್ತರಾಗಿ ಹಲವು ಮುಂಬೈ ಸೇರಿರುವ ಶಾಸಕರ ಜೊತೆಗೆ ಮತ್ತೋರ್ವ ಕಾಂಗ್ರೆಸ್ ಶಾಸಕ ಕೂಡ ಸದನಕ್ಕೆ ಗೈರಾಗಿದ್ದಾರೆ.ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶ್ರೀಮಂತ ಪಾಟೀಲ್ ಸ್ಪೀಕರ್ ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. 

"

ಕರ್ನಾಟಕ ರಾಜಕೀಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳುತ್ತಿರುವ ಫೋಟೋ ಕಳುಹಿಸಿದ್ದು, ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ತಮಗೆ ಸದನಕ್ಕೆ ಹಾಜರಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಬುಧವಾರವಷ್ಟೇ ರೆಸಾರ್ಟ್ ನಿಂದ ಕಣ್ ತಪ್ಪಿಸಿ ತೆರಳಿದ್ದ ಶಾಸಕ ಇದೀಗ ಆಸ್ಪತ್ರೆಯಲ್ಲಿದ್ದು, ಇದರಿಂದ ಅತೃಪ್ತರೊಂದಿಗೆ ಮತ್ತೋರ್ವ ಕೈ ಶಾಸಕ ಗೈರಾಗುವ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕುಸಿಯುವಂತೆ ಮಾಡಿದೆ.