ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಹುದ್ದೆಯಿಂದ ನಿರ್ಗಮಿಸುತ್ತಿದ್ದಾರೆ. ಅವರ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿತ್ತು ಎಂಬ ಊಹಾಪೋಹಗಳಿಗೂ ಈ ಮೂಲಕ ತೆರೆ ಬಿದ್ದಿದೆ.
ಬೆಂಗಳೂರು[ಜೂ. 30] ರಾಜ್ಯ ಮುಖ್ಯ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇವಾವಧಿ ಮುಕ್ತಾಯವಾಗಿದೆ. 37 ವರ್ಷಗಳ ಕಾಲ ಸರ್ಕಾರಿ ಕರ್ತವ್ಯದಲ್ಲಿದ್ದ ಕೆ.ರತ್ನಪ್ರಭಾ ಸೇವಾವಧಿ ಇಂದು ಅಂತ್ಯವಾಗುತ್ತಿದ್ದು ಹೊಸ ಕಾರ್ಯದರ್ಶಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಆರಂಭದಲ್ಲಿ ರತ್ನಪ್ರಭಾ ಅವರನ್ನೇ ಮುಂದುವರಿಸಲು ಸಿಎಂ ಕುಮಾರಸ್ವಾಮಿ ಹಿಂದೇಟು ಹಾಕಿದ್ದರು. ಇದೀಗ ಟಿ.ಎಂ. ವಿಜಯ್ ಭಾಸ್ಕರ್ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ರತ್ನಪ್ರಭಾ ಅವರನೇ ಮುಂದುವರಿಸಿ ಎಂದು ಜೂನ್ 17 ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದರು. ಆದರೆ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ನಿವೃತ್ತಿಯಾಗುತ್ತಿರುವ ಕೆ.ರತ್ನಪ್ರಭಾ ಸರಣಿ ಟ್ವೀಟ್ ಗಳನ್ನು ಮಾಡಿದ್ದು ಬೆಳಗಾವಿ, ಬೀದರ್, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ್ದಾರೆ. ಅಲ್ಲದೇ 37 ವರ್ಷದ ಅವಧಿ ಹೇಗಿತ್ತು ಎಂಬುದನ್ನು ಬರೆದುಕೊಂಡಿದ್ದಾರೆ.
