ನ್ಯಾಯಾಂಗ ನಿಂದನೆ ಆರೋಪದಲ್ಲಿ ಕಲ್ಕತ್ತಾ ನ್ಯಾಯಮೂರ್ತಿ ಸಿ ಎಸ್ ಕರ್ನನ್'ಗೆ 6 ತಿಂಗಳು ಸುಪ್ರೀಂಕೋರ್ಟ್ ಜೈಲುಶಿಕ್ಷೆ ವಿಧಿಸಿದ್ದು ಅವರು ದೇಶವನ್ನು ಬಿಟ್ಟು ಹೊರಹೋಗಿದ್ದಾರೆ ಎಂದು ಅವರ ಕಾನೂನು ಸಲಹೆಗಾರ ಹೇಳಿದ್ದಾರೆ.
ನವದೆಹಲಿ (ಮೇ.11): ನ್ಯಾಯಾಂಗ ನಿಂದನೆ ಆರೋಪದಲ್ಲಿ ಕಲ್ಕತ್ತಾ ನ್ಯಾಯಮೂರ್ತಿ ಸಿ ಎಸ್ ಕರ್ನನ್'ಗೆ 6 ತಿಂಗಳು ಸುಪ್ರೀಂಕೋರ್ಟ್ ಜೈಲುಶಿಕ್ಷೆ ವಿಧಿಸಿದ್ದು ಅವರು ದೇಶವನ್ನು ಬಿಟ್ಟು ಹೊರಹೋಗಿದ್ದಾರೆ ಎಂದು ಅವರ ಕಾನೂನು ಸಲಹೆಗಾರ ಹೇಳಿದ್ದಾರೆ.
ಹಾಲಿ ನ್ಯಾಯಾಧೀಶರೊಬ್ಬರಿಗೆ ಜೈಲುಶಿಕ್ಷೆ ವಿಧಿಸಿದ್ದು ಇದೇ ಮೊದಲ ಬಾರಿಯಾಗಿದೆ. ಆದರೆ ಅವರು ನ್ಯಾಯಾಂಗಕ್ಕೆ ಹಾಜರಾಗಿರಲಿಲ್ಲ. ಶಿಕ್ಷೆ ಪ್ರಕಟಗೊಂಡ ಬಳಿಕ ಅವರು ಚೆನ್ನೈಗೆ ತೆರಳಿದ್ದರು. ಮಾಹಿತಿ ತಿಳಿದ ಪಶ್ಚಿಮ ಬಂಗಾಳ ಪೊಲೀಸರು ಚೆನ್ನೈಗೆ ತೆರಳಿ ಗೆಸ್ಟ್ ಹೌಸ್ ಮೇಲೆ ದಾಳಿ ಮಾಡುವ ವೇಳೆಗಾಗಲೇ ಇವರು ತಪ್ಪಿಸಿಕೊಂಡಿದ್ದರು. ಪೊಲೀಸರು ದಾಳಿಯನ್ನು ಮುಂದುವರೆಸಿದ್ದು ಕರ್ನನ್ ರವರನ್ನು ಪತ್ತೆ ಹಚ್ಚಲು ವಿಫಲರಾಗಿದ್ದರು.
ನ್ಯಾ. ಕರ್ನನ್ ತೀರ್ಪಿನ ವಿರುದ್ಧ ಮೇನ್ಮನವಿ ಸಲ್ಲಿಸಿದ್ದಾರೆ.
