ನವದೆಹಲಿ(ಮೇ.09): ಸುಪ್ರಿಂಕೋರ್ಟ್'ನ ಹಿರಿಯ ನ್ಯಾಯಾಧೀಶರಾದ ಜೆ. ಚಲಮೇಶ್ವರ್ ಅವರು ಸುಪ್ರಿಂಕೋರ್ಟ್'ನ ಬಾರ್ ಅಸೋಸಿಯೇಷನ್ ನೀಡಿದ ವಿದಾಯ ಬಿಳ್ಕೋಡುಗೆ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಜೂನ್.22ರಂದು ಜೆ. ಚಲಮೇಶ್ವರ್ ನಿವೃತ್ತರಾಗಲಿದ್ದು, ಈ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್'ನ ಬಾರ್ ಅಸೋಸಿಯೇಷನ್ ವಿದಾಯ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಆದರೆ ಖಾಸಗಿ ಕಾರಣಗಳಿಂದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಕೆಲ ತಿಂಗಳ ಹಿಂದೆ ಚಲಮೇಶ್ವರ್ ಒಳಗೊಂಡು  ರಂಜನ್ ಗೊಗಾಯ್, ಎಂ.ಬಿ.ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡೆದ್ದು ಪತ್ರಿಕಾಗೋಷ್ಠಿ ನಡೆಸಿದ್ದರು.
ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ಅವರ ತಂಡ ಜೆ. ಚಲಮೇಶ್ವರ್ ಅವರನ್ನು ಭೇಟಿಯಾಗಿ ಮೇ.18ರ ನಿವೃತ್ತಿ ಸಮಾರಂಭಕ್ಕೆ ಆಹ್ವಾನಿಸಿತ್ತು. ನಿವೃತ್ತರಾದವರನ್ನು ಸಮಾರಂಭ ಹಮ್ಮಿಕೊಳ್ಳುವ ಮೂಲಕ ಗೌರವಿಸುವುದು ಸಂಪ್ರದಾಯ. ನ್ಯಾಯಾಂಗದ ಕಾರ್ಯದ ನಿಮಿತ್ತ ಚಲಮೇಶ್ವರ್ ಇಂದು ಸುಪ್ರಿಂಕೋರ್ಟ್'ಗೆ ಹಾಜರಾಗಿರಲಿಲ್ಲ.