ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೇಲಿನ 15 ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾ. ಚಲಮೇಶ್ವರ್  ಹಿಂದೆ ಸರಿದಿದ್ದಾರೆ.

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೇಲಿನ 15 ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾ. ಚಲಮೇಶ್ವರ್ ಹಿಂದೆ ಸರಿದಿದ್ದಾರೆ.


ಈ ಹಿಂದೆ ನಾಲ್ಕೈದು ಬಾರಿ ಪ್ರಕರಣಚ ವಿಚಾರಣೆ ನಡೆಸಿದ ನ್ಯಾ.ಚಮಮೇಶ್ವರ್, 'ಬೇರೆ ಪೀಠದ ಎದುರು ವಿಚಾರಣೆ ನಡೆಯಲಿ,' ಎಂದು ಹೇಳಿದ್ದಾರೆ. ನೇತೃತ್ವದ ದ್ವಿ ಸದಸ್ಯ ಪೀಠದಡಿ ನೋಟಿಫಿಕೇಶನ್ ಪ್ರಕರಣದ ವಿಚಾರಣೆ ನಡೆದಿದ್ದು, ಯಡಿಯೂರಪ್ಪ ಮೇಲಿನ ಆರೋಪಗಳನ್ನು ಹೈಕೋರ್ಟ್ ರದ್ದು ಮಾಡಿತ್ತು.

ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಮತ್ತು ಸಿರಾಜಿನ್ ಪಾಷಾ ಎಂಬುವವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳ ಈ ನಿರ್ಧಾರಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ.