Asianet Suvarna News Asianet Suvarna News

70 ದೇಶಗಳ ಎತ್ತರದ ಪರ್ವತ ಏರಿದ್ದ ಪರ್ವತಾರೋಹಿ ಜಂಕೊ ತಾಬೆಗೆ ವಿಧಿವಶ

77 ವರ್ಷದ ಜಂಕೊ ತಾಬೆ 70 ದೇಶಗಳ ಎತ್ತರದ ಪರ್ವತಗಳನ್ನು ಹತ್ತಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಪರ್ವತಾರೋಹಣೆಗೆ ಮೀಸಲಿರಿಸಿದ್ದರು. 1969 ರಲ್ಲಿ ಪರ್ವತಾರೋಹಿಗಳ ಲೇಡಿಸ್ ಕ್ಲಬ್ ಸೇರಿದ ಜಂಕೋ, ಮೇ 16, 1975ರಲ್ಲಿ ಮೌಂಟ್ ಎವೆರೆಸ್ಟ್ ಹತ್ತಿ ವಿಶ್ವ ದಾಖಲೆ ಮಾಡಿದ್ದರು. ಆ ನಂತರದಿಂದ 1992ರಲ್ಲಿ ಏಳು ಖಂಡಗಳ ಅತೀ ಎತ್ತರದ ಏಳು ಪರ್ವತಗಳನ್ನು ಹತ್ತಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಂಕೋ ಟೋಕಿಯೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Junko Tabei first woman to climb Mount Everest dead at 77

ಟೋಕಿಯೋ(ಅ.24): ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದ ಮೊದಲ ಮಹಿಳೆ ಜಪಾನಿನ ಪರ್ವತಾರೋಹಿ ಜಂಕೊ ತಾಬೆಗೆ  ವಿಧಿವಶರಾಗಿದ್ದಾರೆ.

77 ವರ್ಷದ ಜಂಕೊ ತಾಬೆ 70 ದೇಶಗಳ ಎತ್ತರದ ಪರ್ವತಗಳನ್ನು ಹತ್ತಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಪರ್ವತಾರೋಹಣೆಗೆ ಮೀಸಲಿರಿಸಿದ್ದರು. 1969 ರಲ್ಲಿ ಪರ್ವತಾರೋಹಿಗಳ ಲೇಡಿಸ್ ಕ್ಲಬ್ ಸೇರಿದ ಜಂಕೋ, ಮೇ 16, 1975ರಲ್ಲಿ ಮೌಂಟ್ ಎವೆರೆಸ್ಟ್ ಹತ್ತಿ ವಿಶ್ವ ದಾಖಲೆ ಮಾಡಿದ್ದರು.

ಆ ನಂತರದಿಂದ 1992ರಲ್ಲಿ ಏಳು ಖಂಡಗಳ ಅತೀ ಎತ್ತರದ ಏಳು ಪರ್ವತಗಳನ್ನು ಹತ್ತಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಂಕೋ ಟೋಕಿಯೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios