ರೇಪ್‌ ಕೇಸ್ ಆರೋಪಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಬೇಲ್ ದಯಪಾಲಿಸಿದ ಸೆಶನ್ಸ್ ಕೋರ್ಟ್ ಜಡ್ಜ್ 'ನ್ನು ಸೇವೆಯಿಂದ ಶುಕ್ರವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಅಮಾನತು ಮಾಡಿದೆ. ಜೊತೆಗೆ ಅವರ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದೆ. ಅಷ್ಟೇ ಅಲ್ಲದೇ ಪೋಕ್ಸೊ ಕೋರ್ಟ್‌ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಬೇಲ್‌'ನ್ನು ರದ್ದುಗೊಳಿಸಿದೆ.
ಲಕ್ನೋ(ಎ.29): ರೇಪ್ ಕೇಸ್ ಆರೋಪಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಬೇಲ್ ದಯಪಾಲಿಸಿದ ಸೆಶನ್ಸ್ ಕೋರ್ಟ್ ಜಡ್ಜ್ 'ನ್ನು ಸೇವೆಯಿಂದ ಶುಕ್ರವಾರ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಅಮಾನತು ಮಾಡಿದೆ. ಜೊತೆಗೆ ಅವರ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದೆ. ಅಷ್ಟೇ ಅಲ್ಲದೇ ಪೋಕ್ಸೊ ಕೋರ್ಟ್ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಬೇಲ್'ನ್ನು ರದ್ದುಗೊಳಿಸಿದೆ.
ಗಾಯತ್ರಿ ಪ್ರಜಾಪತಿಗೆ ಬೇಲ್ ರದ್ದು ಮಾಡಿದ ಪೋಕ್ಸೋ ಕೋರ್ಟ್ ಕ್ರಮವನ್ನು ಪ್ರಶ್ನಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರಜಾಪತಿಯ ಬೇಲ್ ರದ್ದು ಮಾಡುವಂತೆ ಮನವಿ ಮಾಡಿತ್ತು. 49 ವರ್ಷದ ಗಾಯತ್ರಿ ಪ್ರಜಾಪತಿ ಮತ್ತಿತರು ಆರು ಮಂದಿ ಮಹಿಳೆಯೋರ್ವರ ಮೇಲೆ ಗ್ಯಾಂಗ್ ರೇಪ್ ಎಸಗಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಅಕ್ಟೋಬರ್ 2014 ರಿಂದ ಜುಲೈ 2016ರವರೆಗೆ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾಳೆ. ಅಂತೆಯೇ ಪ್ರಜಾಪತಿಯನ್ನು ಇದೇ ಮಾ.15 ರಂದು ಲಕ್ನೋನಲ್ಲಿ ಅರೆಸ್ಟ್ ಮಾಡಲಾಗಿದೆ.
