ಐಟಿ ರೇಡ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಡಿಕೆಶಿ ವಿರುದ್ಧ ಎಫ್'ಐಆರ್ ದಾಖಲಿಸಲು ನ್ಯಾಯಾಧೀಶರ ಅನುಮತಿ

First Published 14, Feb 2018, 9:21 PM IST
Judge Permission FIR Lodge Against Minister DKS
Highlights

ಮಾರ್ಚ್ 22ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಕೋರ್ಟ್'ಗೆ ಹಾಜರಾಗದಿದ್ದರೆ ಬಂಧನ ಸಾಧ್ಯತೆಯಿದೆ. ನ್ಯಾಯಾಧೀಶರೆ ಅನುಮತಿ ನೀಡಿರುವುದರಿಂದ ಸಚಿವರಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರು(ಫೆ.14): ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಎಫ್'ಐಆರ್ ದಾಖಲಿಸಲು ಆರ್ಥಿಕ ಅಪರಾಧಗಳ ಘಟಕದ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.   

ಕೆಲವು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಕೊಟ್ಯಂತರ ಮೊತ್ತದ ದಾಖಲೆ ಇಲ್ಲದ ಆಸ್ತಿ ಪತ್ತೆಯಾಗಿತ್ತು. ದಾಖಲೆಗಳನ್ನ ನಾಶ ಮಾಡಿದ ಆರೋಪದ ಮೇಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದ್ದು, ಮಾರ್ಚ್ 22ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಕೋರ್ಟ್'ಗೆ ಹಾಜರಾಗದಿದ್ದರೆ ಬಂಧನ ಸಾಧ್ಯತೆಯಿದೆ. ನ್ಯಾಯಾಧೀಶರೆ ಅನುಮತಿ ನೀಡಿರುವುದರಿಂದ ಸಚಿವರಿಗೆ ಸಂಕಷ್ಟ ಎದುರಾಗಿದೆ.

ಆರ್ಥಿಕ ಅಪರಾಧಗಳ ಘಟಕದ ನ್ಯಾಯಾಧೀಶರಾದ ಶಾಂತಪ್ಪ ಆಳ್ವ ಅನುಮತಿ ನೀಡಿದ್ದಾರೆ. ಐಟಿ ದಾಳಿಯ ವೇಳೆ ಸಚಿವರು ಕೆಲವು ಮಹತ್ವ ಮಾಹಿತಿಯುಳ್ಳ ಕಾಗದಗಳನ್ನು ಹರಿದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

loader