ಪದೇ ಪದೆ ವಿದ್ಯುತ್‌ ವ್ಯತ್ಯಯ ಉಂಟಾ ಗುತ್ತಿದ್ದರಿಂದ ಸಿಟ್ಟಿಗೆದ್ದ ನಿವೃತ್ತ ನ್ಯಾಯಾಧೀಶ ಎ.ಕೆ. ರಾಘವ್‌ ತಮ್ಮ ಮನೆಯ ಹೊರಗಡೆ ಟ್ರಾನ್ಸ್‌ಫಾರ್ಮರ್‌ ಲೈನ್‌ ದುರಸ್ತಿಗೊಳಿಸುತ್ತಿದ್ದ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಗುರುಗ್ರಾಮ: ಪದೇ ಪದೆ ವಿದ್ಯುತ್ ವ್ಯತ್ಯಯ ಉಂಟಾ ಗುತ್ತಿದ್ದರಿಂದ ಸಿಟ್ಟಿಗೆದ್ದ ನಿವೃತ್ತ ನ್ಯಾಯಾಧೀಶ ಎ.ಕೆ. ರಾಘವ್ ತಮ್ಮ ಮನೆಯ ಹೊರಗಡೆ ಟ್ರಾನ್ಸ್ಫಾ ರ್ಮರ್ ಲೈನ್ ದುರಸ್ತಿಗೊಳಿಸುತ್ತಿದ್ದ ವಿದ್ಯುತ್ ಇಲಾಖೆ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಆದರೆ, ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಗಾಯ ಗೊಂಡಿಲ್ಲ. ಎರಡು ಗುಂಡುಗಳನ್ನು ಗಾಳಿಯಲ್ಲಿ ಮತ್ತು ನಾಲ್ಕು ಗುಂಡುಗಳನ್ನು ಕಾರ್ಯಕರ್ತರ ಮೇಲೆ ಹಾರಿಸಿದ್ದಾರೆ. ಗುಂಡುಗಳು ಟ್ರ್ಯಾಕ್ಟರ್ ಟ್ರಾಲಿ ಮತ್ತು ಟೈರ್ಗೆ ತಗುಲಿದ್ದರಿಂದ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಆರೋಪಿ ನಿವೃತ್ತ ಜಡ್ಜ್ ವಿರುದ್ಧ ಕೊಲೆ ಯತ್ನದ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.
