ಜೇಪೀ ಸಮೂಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಂಪನಿಯ ಉನ್ನತ ಉದ್ಯೋಗಿಗಳಿಂದಲೇ ಸಾಲ ಬಯಸಿದೆ. ತನ್ನ ಕಂಪನಿಯ ಉನ್ನತ ಹುದ್ದೆಯಲ್ಲಿರುವ ನೌಕರರಿಂದ ಅಕ್ಟೋಬರ್ ತಿಂಗಳ ವೇತನದಲ್ಲಿನ ಕೆಲ ಭಾಗವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಲು ನಿರ್ಧರಿಸಿದೆ.
ನೋಯ್ಡಾ(ನ.19) ರಿಯಲ್ ಎಸ್ಟೇಟ್ ಉದ್ದಿಮೆಯ ದೊಡ್ಡ ಕಂಪನಿಯಾದ ಜೇಪೀ ಸಮೂಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಂಪನಿಯ ಉನ್ನತ ಉದ್ಯೋಗಿಗಳಿಂದಲೇ ಸಾಲ ಬಯಸಿದೆ! ಅಚ್ಚರಿಯೆನ್ನಿಸಿದರೂ ಇದು ಸತ್ಯ. ತನ್ನ ಕಂಪನಿಯ ಉನ್ನತ ಹುದ್ದೆಯಲ್ಲಿರುವ ನೌಕರರಿಂದ ಅಕ್ಟೋಬರ್ ತಿಂಗಳ ವೇತನದಲ್ಲಿನ ಕೆಲ ಭಾಗವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಲು ನಿರ್ಧರಿಸಿದೆ.
2008ರ ಜನವರಿಯಿಂದ 9 ಮಾಸಿಕ ಕಂತುಗಳಲ್ಲಿ ಮರುಪಾವತಿಸುವುದಾಗಿ ಹೇಳಿದೆ. ಆದರೆ ಕಂಪನಿಯ ಕೆಳಹಂತದ ನೌಕರರಿಂದ ಯಾವುದೇ ರೀತಿಯ ಸಾಲವನ್ನು ಯಾಚಿಸಿಲ್ಲ ಎಂದು ಜೇಪೀ ಗ್ರೂಪ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಜೇಪೀ ಸಮೂಹವು ತನ್ನ ಬಳಿ ಫ್ಲ್ಯಾಟ್ ಖರೀದಿಸಿದ ಗ್ರಾಹಕರಿಗೆ ಸಕಾಲದಲ್ಲಿ ಮನೆ ಹಂಚಿಕೆ ಮಾಡಲು ವಿಫಲವಾಗಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ.
ಗ್ರಾಹಕರಿಗೆ ವಂಚನೆಯಾಗದಂತೆ ನೋಡಿಕೊಳ್ಳಲು, ತನ್ನ ರಿಜಿಸ್ಟ್ರಿಯಲ್ಲಿ 2000 ಕೋಟಿ ರು. ಠೇವಣಿ ಇಡಲು ಜೇಪೀ ಸಮೂಹಕ್ಕೆ ಇತ್ತೀಚೆಗೆ ಸುಪ್ರೀಂ ಸೂಚಿಸಿತ್ತು.
