ದೈನಿಕ  ಜಾಗರಣ್ ಪತ್ರಿಕೆಯ ವರದಿಗಾರನಾಗಿದ್ದ ಧರ್ಮೇಂದ್ರ ಸಿಂಗ್ ತಮ್ಮ ನಿವಾಸದ ಚಹಾ ಅಂಗಡಿ ಬಳಿ ನಿಂತಿದ್ದಾಗ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ರೋಹ್ತಾಸ್ (ಬಿಹಾರ): ಬಿಹಾರದ ರೊಹ್ತಾಸ್ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪ್ರಮುಖ ಹಿಂದಿ ದಿನಪತ್ರಿಕೆಯ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.

ದೈನಿಕ ಜಾಗರಣ್ ಪತ್ರಿಕೆಯ ವರದಿಗಾರನಾಗಿದ್ದ ಧರ್ಮೇಂದ್ರ ಸಿಂಗ್ ತಮ್ಮ ನಿವಾಸದ ಚಹಾ ಅಂಗಡಿ ಬಳಿ ನಿಂತಿದ್ದಾಗ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ವಾರಣಾಸಿಗೆ ಕೊಂಡೊಯ್ಯುತ್ತಿರುವ ವೇಳೆ ದಾರಿ ಮಧ್ಯೆಯೇ ಧರ್ಮೇಂದ್ರ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಕಳೆದ ಅಕ್ಟೋಬರ್’ನಲ್ಲಿ, ಹೇಮ ತ್ ಯಾದವ್ ಎಂಬ ಟಿವಿ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶದಲ್ಲಿ ಇದೇ ರಿತಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.