ಹಿಂದೂ ದೇವತೆಗಳು, ಪ್ರಧಾನಿ ಮೋದಿ ವಿರುದ್ಧ ಅಶ್ಲೀಲ ಪೋಸ್ಟ್

Journalist Lodges Complaint FB obscene Picture
Highlights

  • ಬಸೀರ್ ಅಡ್ಯಾರ್ ಬಸೀರ್ ಮತ್ತು ರಂಗನಾಥ್ ಶಾಂಘವಿ ಎಂಬುವವರು ಹಿಂದು ದೇವತೆಗಳನ್ನು ತೀರ ವಿಕೃತವಾಗಿ ಚಿತ್ರಿಸಿದ್ದರು
  • ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಅಶ್ಲೀಲ ಚಿತ್ರ

ಬೆಂಗಳೂರು[ಜೂ.19]: ಹಿಂದು ದೇವತೆಗಳ ವಿರುದ್ಧ  ಫೇಸ್'ಬುಕ್'ನಲ್ಲಿ ಅವಹೇಳನಕಾರಿ ಪೋಸ್ಟ್ ಹಿನ್ನಲೆಯಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು  ಬಸೀರ್ ಅಡ್ಯಾರ್ ಬಸೀರ್ ಮತ್ತು ರಂಗನಾಥ್ ಶಾಂಘವಿ ಎಂಬುವವರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಸೀರ್ ಅಡ್ಯಾರ್ ಬಸೀರ್ ಮತ್ತು ರಂಗನಾಥ್ ಶಾಂಘವಿ ಎಂಬುವವರು ಪಾರ್ವತಿ, ಸೀತೆ, ಲಕ್ಷ್ಮೀ ಮತ್ತು ಶಿವನ ಫೋಟೋಗಳನ್ನು ತೀರ ವಿಕೃತವಾಗಿ ಚಿತ್ರಿಸಿ ತಮ್ಮ ಫೇಸ್'ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದು ದೇವತೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ.

ಈ ಪೋಸ್ಟ್'ಗಳಿಂದ ಕೋಮು ಸಾಮರಸ್ಯ ಹಾಳಾಗುವುದರ ಜೊತೆಗೆ ಸಮಾಜದಲ್ಲಿ ಗಲಭೆಗಳಿಗೆ ಪ್ರಚೋದನೆ ಉಂಟಾಗುವ ಸಾಧ್ಯತೆಯಿರುತ್ತದೆ. ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

loader