ಅಪಘಾತದಲ್ಲಿ ಇಬ್ಬರು ಪತ್ರಕರ್ತರ ಸಾವು: ಕೊಲೆ ಶಂಕೆ ?

First Published 26, Mar 2018, 3:48 PM IST
Journalist killed in Bihar as SUV rams into bike family alleges murder
Highlights

ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಹಾಗೂ ವಿಜಯ್ ಸಿಂಗ್ ಮೃತರು. ಆದಾಗ್ಯೂ ಮೃತರ ಪೋಷಕರು ತಮ್ಮ ಮಕ್ಕಳ ಸಾವಿಗೆ ಗ್ರಾಮದ ಮಾಜಿ ಮುಖ್ಯಸ್ಥನೆ ಕಾರಣ ಎಂದು ಆರೋಪಿಸಿದ್ದಾರೆ.

ಪಾಟ್ನಾ(ಮಾ.26): ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪತ್ರಕರ್ತರು ಮೃತಪಟ್ಟ ಘಟನೆ ಬಿಹಾರದ ಬೋಜ್'ಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಹಾಗೂ ವಿಜಯ್ ಸಿಂಗ್ ಮೃತರು. ಆದಾಗ್ಯೂ ಮೃತರ ಪೋಷಕರು ತಮ್ಮ ಮಕ್ಕಳ ಸಾವಿಗೆ ಗ್ರಾಮದ ಮಾಜಿ ಮುಖ್ಯಸ್ಥನೆ ಕಾರಣ ಎಂದು ಆರೋಪಿಸಿದ್ದಾರೆ. ಅಹಮದ್ ಅಲಿಯಾಸ್  ಹರಸು ಎಂಬಾತನೆ ಕಾರಣ ಎಂದು ಆರೋಪಿಸಿದ್ದಾರೆ.

ವಿವಾದವೊಂದಕ್ಕೆ ಸಂಬಂಧಿಸಿದಂತೆ ಅಹಮದ್ ಅಲಿಯಾಸ್  ಹರಸು ಎಂಬಾತನ ಜೊತೆ ವಾಗ್ಆದ ನಡೆಸಿದ ಕೆಲ ಹೊತ್ತಿನಲ್ಲೆ ಆತನಿಗೆ ಸೇರಿದ ಕಾರು ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮುಖಂಡನ ಮನೆಯನ್ನು ಸುಟ್ಟು ಹಾಕಿದ್ದಾರೆ. ಹಳ್ಳಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಪೊಲೀಸರು ಬಿಗಿಭದ್ರತೆ ಕೈಕೊಂಡಿದ್ದಾರೆ.

loader