ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮ ಅಸ್ತಿತ್ವದಲ್ಲಿತ್ತಾ?

First Published 1, Jun 2018, 11:06 AM IST
Journalism established in Mahabharatha Period says Uttar Pradesh DCM
Highlights

ಆಧುನಿಕ ಜಗತ್ತಿನ ಅನ್ವೇಷಣೆಗಳನ್ನು ಪುರಾತನ ಕಾಲದೊಂದಿಗೆ ಜೋಡಿಸುವ ಬಿಜೆಪಿಗರ ಹೇಳಿಕೆಗಳು ಮುಂದುವರೆದಿದ್ದು, ಪತ್ರಿಕೋದ್ಯಮ ಎನ್ನುವುದು ಮಹಾಭಾರತದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದಾರೆ.

ಮಥುರಾ (ಜೂ. 01):  ಆಧುನಿಕ ಜಗತ್ತಿನ ಅನ್ವೇಷಣೆಗಳನ್ನು ಪುರಾತನ ಕಾಲದೊಂದಿಗೆ ಜೋಡಿಸುವ ಬಿಜೆಪಿಗರ ಹೇಳಿಕೆಗಳು ಮುಂದುವರೆದಿದ್ದು, ಪತ್ರಿಕೋದ್ಯಮ ಎನ್ನುವುದು ಮಹಾಭಾರತದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರ್ಮಾ, ಪತ್ರಿಕೋದ್ಯಮದ ಹುಟ್ಟಿನ ಬಗೆಗಿನ ಈಗಿರುವ ಪ್ರತಿಪಾದನೆಗಳನ್ನು ಅಲ್ಲಗಳೆದು, ಇದು ಮಹಾಭಾರತ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು’ ಎಂದಿದ್ದಾರೆ. ‘ಮಹಾಭಾರತದ ಪೌರಾಣಿಕ ಪಾತ್ರದಲ್ಲಿ ಸಂಜಯ, ಹಸ್ತಿನಾಪುರದಲ್ಲಿಯೇ ಕುಳಿತು ಅಂದ ದೃತರಾಷ್ಟ್ರನಿಗೆ ಕುರುಕ್ಷೇತ್ರದ ಸನ್ನಿವೇಶವನ್ನು ಹೇಳುತ್ತಿದ್ದ. ಇದು ನೇರಪ್ರಸಾರ ಅಲ್ಲದಿದ್ದರೆ ಮತ್ತೇನು?’ ಎಂದು ಶರ್ಮಾ ಪ್ರಶ್ನಿಸಿದ್ದಾರೆ. ಅಲ್ಲದೆ ನಾರದನನ್ನು ಗೂಗಲ್‌ಗೆ ಹೋಲಿಸಿದ್ದಾರೆ. 

loader