ಸೆಕ್ಷನ್ 3/25 ಮತ್ತು 3/27ರಡಿ ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಿಸಲಾಗಿದೆ. .22 ರೈಫಲ್ ಮತ್ತು .32 ರಿವಾಲ್ವರ್ ಅನ್ನ ಸಲ್ಮಾನ್ ಖಾನ್ ಹೊಂದಿದ್ದರು. ಈ ಅಕ್ರಮ ಶಸ್ತ್ರಾಸ್ತ್ರಗಳನ್ನ ಜೋಧಪುರದ ಕಂಕಣಿ ಗ್ರಾಮದ ಅರಣ್ಯದಲ್ಲಿ  ಕೃಷ್ಣಮೃಗ ಬೇಟೆಗೆ ಬಳಸಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಸಲ್ಲು ದೋಷಿಯೆಂದು ಸಾಬೀತಾದರೆ 7 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.

ಜೋಧಪುರ್(ಜ.18): ಸಲ್ಮಾನ್ ಖಾನ್ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ದಲ್ಪಾತ್ ಸಿಂಗ್ ತೀರ್ಪು ಪ್ರಕಟಿಸಲಿದ್ದಾರೆ.

1998ರಲ್ಲಿ ಹಮ್ ಸಾತ್ ಸಾತ್ ಹೈನ್ ಚಿತ್ರದ ಶೂಟಿಂಗ್ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಲ್ಲೂ ಮೇಲಿದೆ. ಜನವ 9ಕ್ಕೆ ಪ್ರಕರಣದ ವಾದ-ವಿವಾದ ಪೂರ್ಣಗೊಂಡಿತ್ತು.ತೀರ್ಪನ್ನ ಇವತ್ತಿಗೆ ಕಾಯ್ದಿರಿಸಲಾಗಿತ್ತು.