ವಿಮಾನ ಹತ್ತುವ ಮುನ್ನ ಖರೀದಿಸಿದ್ದ ಟಿಕೆಟ್‌ಗೆ 13 ಕೋಟಿ ಲಾಟರಿ ಹೊಡೀತು

First Published 6, Jul 2018, 9:26 AM IST
Jobless man from Kerala wins Rs 13 crore in UAE raffle
Highlights

ವಿಮಾನ ಹತ್ತುವ ಮುನ್ನ ಖರೀದಿಸಿದ್ದ ಟಿಕೆಟ್‌ಗೆ  ವ್ಯಕ್ತಿಯೋರ್ವನಿಗೆ ಬರೋಬ್ಬರಿ 13 ಕೋಟಿ ಲಾಟರಿ ಹೊಡೆದ ಘಟನೆ ಅಬುದಾಬಿಯಲ್ಲಿ ನಡೆದಿದೆ. 

ಅಲಪ್ಪುಳ: ಕೆಲವೊಮ್ಮೆ ಹೀಗೆ, ಅದೃಷ್ಟಹೇಗೆಲ್ಲ ಕೈಚಾಚುತ್ತದೆ ಎಂದು ಹೇಳಲಾಗುವುದಿಲ್ಲ. ಕೇರಳದ ನಿರುದ್ಯೋಗಿಯೊಬ್ಬರಿಗೆ ಅಬುಧಾಬಿಯ ಲಾಟರಿಯೊಂದರಲ್ಲಿ ಬರೋಬ್ಬರಿ 13 ಕೋಟಿ ರು. ಬಹುಮಾನ ಬಂದಿದೆ. 

ಕಳೆದ ಆರು ವರ್ಷಗಳಿಂದ ಅಬುಧಾಬಿಯಲ್ಲಿ ಸಿವಿಲ್‌ ಸೂಪರ್‌ವೈಸರ್‌ ಆಗಿದ್ದ ಮ್ಯಾಥ್ಯು ಇತ್ತೀಚೆಗಷ್ಟೇ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದರು. 

ಜೂ.24ರಂದು ಭಾರತಕ್ಕೆ ಹಿಂದಿರುಗುವುದಕ್ಕೂ ಮೊದಲು ಮ್ಯಾಥ್ಯೂ, ತನ್ನ 18 ಮಂದಿ ಸ್ನೇಹಿತರಿಂದ ಹಣ ಸಂಗ್ರಹಿಸಿ ಆ ಮೂಲಕ 9000 ರು. ತೆತ್ತು ಅದರಿಂದ ಲಾಟರಿ ಟಿಕೆಟ್‌ ಖರೀದಿಸಿದ್ದರು. 

ಅಚ್ಚರಿ ಎಂಬಂತೆ ಇದೀಗ ಅದೇ ಟಿಕೆಟ್‌ಗೆ ಭರ್ಜರಿ 13 ಕೋಟಿ ರು. ಲಾಟರಿ ಹೊಡೆದಿದೆ.

loader