ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ನವದೆಹಲಿ(ಅ.08): ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ದೇಶಾದ್ಯಂತ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ ಯುವಕರು, ವಿದ್ಯಾವಂತರು ಆತಂಕದಲ್ಲಿದ್ದರೆ, ಕೇಂದ್ರ ಸಚಿವರಿಂದ ಇಂತಹ ಹೇಳಿಕೆ ಹೊರಬಿದ್ದಿದೆ. ಆದರೆ, ಇಷ್ಟು ದಿನ ವಿದ್ಯಾವಂತರು ಬೇರೆಯವರ ಕೈಕೆಳಗೆ ಉದ್ಯೋಗ ಬಯಸುತ್ತಿದ್ದರು, ಉದ್ಯೋಗ ಕಡಿಮೆಯಾದರೆ ಅವರೇ ಸ್ವತಃ ಉದ್ಯೋಗಗಳನ್ನು ನೀಡುವ ಮಟ್ಟಕ್ಕೆ ಬೆಳೆಯಲು ಇದು ಅವಕಾಶ ನೀಡಲಿದೆ ಎಂಬರ್ಥದಲ್ಲಿ ಹೇಳಿದ್ದಾರೆ. ಜಾಗತಿಕ ಆರ್ಥಿಕ ವೇದಿಕೆಯ ಭಾರತೀಯ ಆರ್ಥಿಕ ಸಮ್ಮೇಳನದಲ್ಲಿ, ದೇಶದ ಉದ್ಯೋಗಾವಕಾಶ ಸ್ಥಿತಿಯ ಬಗ್ಗೆ ಉದ್ಯಮ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು.
ಕಳೆದ ಕೆಲವು ವರ್ಷಗಳಲ್ಲಿ 200ಕ್ಕೂ ಅಧಿಕ ಕಂಪೆನಿ ಗಳು ತಮ್ಮ ಉದ್ಯೋಗಾವಕಾಶಗಳಲ್ಲಿ ಮಹತ್ವದ ಕಡಿತ ಮಾಡಿವೆ ಎಂದು ‘ಭಾರ್ತಿ ಏರ್'ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಅದೇ ಸಮಾವೇಶದಲ್ಲಿ ಮಿತ್ತಲ್ ಮಾತಿಗೆ ಪ್ರತಿಕ್ರಿಯೆಯಾಗಿ ಗೋಯಲ್ ಈ ಮಾತುಗಳನ್ನಾಡಿದ್ದರು.
