Asianet Suvarna News Asianet Suvarna News

7 ವರ್ಷದಲ್ಲೇ ದಾಖಲೆಯ ಉದ್ಯೋಗ ಸೃಷ್ಟಿ

ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತಿರುವ ನಡುವೆಯೇ, ಮಾರ್ಚ್’ನಲ್ಲಿ ಸೇವಾ ಕ್ಷೇತ್ರದಲ್ಲಿ 7 ವರ್ಷದಲ್ಲೇ ದಾಖಲೆಯ ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ಸರ್ಕಾರವು ಕೊಂಚ ಸಮಾಧಾನ ಪಡುವಂತಾಗಿದೆ.

Job creation In India

ನವದೆಹಲಿ : ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತಿರುವ ನಡುವೆಯೇ, ಮಾರ್ಚ್’ನಲ್ಲಿ ಸೇವಾ ಕ್ಷೇತ್ರದಲ್ಲಿ 7 ವರ್ಷದಲ್ಲೇ ದಾಖಲೆಯ ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ಸರ್ಕಾರವು ಕೊಂಚ ಸಮಾಧಾನ ಪಡುವಂತಾಗಿದೆ.

‘ನೀಕ್ಕೈ ಇಂಡಿಯಾ ಸವೀರ್‍ಸ್‌ ಬಿಸಿನೆಸ್‌ ಆ್ಯಕ್ಟಿವಿಟಿ’ ಸೂಚ್ಯಂಕದ ಪ್ರಕಾರ ಉದ್ಯೋಗ ಸೃಷ್ಟಿಯು ಶೇ.47.8ರಿಂದ ಮಾಚ್‌ರ್‍ನಲ್ಲಿ ಶೇ.50.3ಕ್ಕೇರಿದೆ. ಫೆಬ್ರವರಿಯಲ್ಲಿ ಇದರ ಪ್ರಮಾಣ ಶೇ.50ಕ್ಕಿಂತ ಕೆಳಗೆ ಕುಸಿದು ಶೇ.47.8ರಷ್ಟುದಾಖಲಾಗಿತ್ತು. ಇದು ಕಳವಳಕ್ಕೆ ಕಾರಣವಾಗಿತ್ತು.

‘ಭಾರತದ ಸೇವಾ ಕ್ಷೇತ್ರ ಈ ತ್ರೈಮಾಸಿಕದ ಕೊನೆಗೆ ಪುನಃ ಹಳಿಗೆ ಬಂದಿದೆ. ಹೊಸ ಉದ್ಯೋಗ ಸೃಷ್ಟಿಯೇ ಇದಕ್ಕೆ ಕಾರಣ. ಉದ್ಯೋಗ ವಲಯವು ಪರಿವರ್ತನೆಯ ಹಾದಿಯಲ್ಲಿದ್ದ ಕಾರಣ ಅಂಕಿ-ಅಂಶಗಳು ಕುಸಿತವಾಗಿದ್ದವು. ಮಾರ್ಚ್ ಉತ್ಪಾದನಾ ವಲಯವು ಸೇವಾ ವಲಯದ ಪ್ರಗತಿಯನ್ನು ಹೆಚ್ಚಿಸಿದ್ದು, ಔದ್ಯೋಗಿಕ ಪ್ರಗತಿಗೆ ಕಾರಣವಾಗಿದೆ’ ಎಂದು ಅರ್ಥಶಾಸ್ತ್ರಜ್ಞ ಆಶ್ನಾ ಧೋಡಿಯಾ ಅಭಿಪ್ರಾಯಪಟ್ಟಿದ್ದಾರೆ.

‘ಜೂನ್‌ 2011ರ ನಂತರ ಕಂಡಿರುವ ಅತಿ ಹೆಚ್ಚಿನ ಔದ್ಯೋಗಿಕ ಪ್ರಗತಿ ಇದಾಗಿದೆ’ ಎಂದು ಧೋಡಿಯಾ ತಿಳಿಸಿದ್ದಾರೆ. ಈ ನಡುವೆ, ಸೇವಾ ಮತ್ತು ಉತ್ಪಾದನೆ- ಎರಡೂ ಕ್ಷೇತ್ರಗಳು ಸೇರಿ ಪ್ರಗತಿ ಸೂಚ್ಯಂಕವು ಶೇ.49.7ರಿಂದ ಶೇ.50.8ಕ್ಕೇರಿದೆ.

Follow Us:
Download App:
  • android
  • ios