Asianet Suvarna News Asianet Suvarna News

ಜಿಯೋಗೆ ಲಾಸ್; ಶೀಘ್ರದಲ್ಲೇ ಭಾರೀ ಬೆಲೆ ಏರಿಕೆ? ಕಾದು ಕುಳಿತಿವೆಯಾ ಇತರ ಕಂಪನಿಗಳೂ..?

ರಿಲಾಯನ್ಸ್ ಜಿಯೋ ತನ್ನ ಪ್ಯಾಕೇಜ್'ಗಳ ಬೆಲೆ ಏರಿಸಲು ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ, ಜಿಯೋ ಬೆಲೆಗಳು ಶೇ. 24ರಿಂದ 95ರಷ್ಟು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ. 399 ರೂಪಾಯಿಯು ಜಿಯೋದ ಅತ್ಯಂತ ಕಡಿಮೆ ಬೆಲೆಯ ಪ್ಯಾಕೇಜ್ ಆಗಿದೆ. ಮೂರು ತಿಂಗಳ ಅವಧಿಯ ಈ ಪ್ಯಾಕೇಜ್'ನ ಬೆಲೆಯಲ್ಲಿ ಶೇ.24 ಏರಿಕೆಯಾಗಲಿದೆ ಎನ್ನಲಾಗಿದೆ.

jio to raise its tariff as it reported net loss this quarter

ನವದೆಹಲಿ(ಅ. 17): ಟೆಲಿಕಾಂ ಕ್ಷೇತ್ರಕ್ಕೆ ರಿಲಾಯನ್ಸ್ ಅಡಿ ಇಡುತ್ತಿದ್ದಂತೆಯೇ ಇಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ನೂರಾರು ರೂ ತೆತ್ತು ಒಂದು ಜಿಬಿ ಡೇಟಾ ಪಡೆಯುತ್ತಿದ್ದ ಗ್ರಾಹಕನಿಗೆ ರಿಲಾಯನ್ಸ್ ಜಿಯೋ ಡೇಟಾ ಸುಗ್ಗಿಯನ್ನೇ ನೀಡಿತು. ಜಿಯೋ ಎಂಟ್ರಿಯಿಂದ ಏರ್'ಟೆಲ್, ವೊಡಾಫೋನ್ ಸೇರಿದಂತೆ ಇತರೆಲ್ಲಾ ಕಂಪನಿಗಳೂ ಅನಿವಾರ್ಯವಾಗಿ ಬೆಲೆ ಇಳಿಸಬೇಕಾಯಿತು. ಜಿಯೋದ ಭರ್ಜರಿ ಆಫರ್'ಗಳನ್ನು ಕಂಡು ಪ್ರತಿಸ್ಪರ್ಧಿ ಕಂಪನಿಗಳು ಕೈಕೈ ಹಿಸುಕಿಕೊಂಡವು. ಟ್ರಾಯ್'ಗೆ ದೂರು ಕೊಟ್ಟವು. ಇಷ್ಟು ಕಡಿಮೆ ಬೆಲೆ ಡೇಟಾ ಕೊಟ್ಟರೆ ಕಂಪನಿ ಮುಚ್ಚಬೇಕಾಗುತ್ತದೆ ಎಂದು ಗೊಣಗಿದವು. ಈ ಪ್ರತಿಸ್ಪರ್ಧಿಗಳ ಕೂಗಿನಲ್ಲಿ ಒಂದಷ್ಟು ಅರ್ಥವಿದೆ ಎಂದು ತಜ್ಞರು ಹೇಳಿದರು. ತಜ್ಞರ ಈ ಮಾತಿಗೆ ಪುಷ್ಟಿ ಕೊಡುವ ಬೆಳವಣಿಗೆ ಆಗುತ್ತಿದೆ. ವರ್ಷಾನುಗಟ್ಟಲೆ ಉಚಿತ ಡೇಟಾ ಸುಗ್ಗಿ ನೀಡಿದ ಜಿಯೋ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಬರೋಬ್ಬರಿ 6,147 ಕೋಟಿ ರೂಪಾಯಿ ಆದಾಯ ಮಾಡಿತಾದರೂ ಲಾಭ ಸಿಗಲಿಲ್ಲ. 270.50 ಕೋಟಿ ನಷ್ಟ ಅನುಭವಿಸಿದೆ.

ಈ ಹಿನ್ನೆಲೆಯಲ್ಲಿ ರಿಲಾಯನ್ಸ್ ಜಿಯೋ ತನ್ನ ಪ್ಯಾಕೇಜ್'ಗಳ ಬೆಲೆ ಏರಿಸಲು ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ, ಜಿಯೋ ಬೆಲೆಗಳು ಶೇ. 24ರಿಂದ 95ರಷ್ಟು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ. 399 ರೂಪಾಯಿಯು ಜಿಯೋದ ಅತ್ಯಂತ ಕಡಿಮೆ ಬೆಲೆಯ ಪ್ಯಾಕೇಜ್ ಆಗಿದೆ. ಮೂರು ತಿಂಗಳ ಅವಧಿಯ ಈ ಪ್ಯಾಕೇಜ್'ನ ಬೆಲೆಯಲ್ಲಿ ಶೇ.24 ಏರಿಕೆಯಾಗಲಿದೆ ಎನ್ನಲಾಗಿದೆ.

ಜಿಯೋದ ಈ ನಿರ್ಧಾರ ನಿರೀಕ್ಷಿತವೇ. ಗಮನಾರ್ಹವೆಂದರೆ, ಜಿಯೋದ ಬೆಲೆ ಇಳಿಕೆ ಪೈಪೋಟಿಯಲ್ಲಿ ಕಂಗಾಲಾಗಿರುವ ಇತರ ಕಂಪನಿಗಳು ಬಹಳ ಕಾಲದಿಂದ ಬೆಲೆ ಏರಿಕೆಗೆ ಕಾಯುತ್ತಾ ಕುಳಿತ್ತಿವೆ. ಈಗ ಜಿಯೋ ಏನಾದರೂ ಬೆಲೆ ಏರಿಕೆ ಮಾಡಿದರೆ ಉಳಿದವು ಮುಲಾಜಿಲ್ಲದೇ ಬೆಲೆ ಹೆಚ್ಚಿಸುತ್ತವೆ. ಅಂದರೆ, ಡೇಟಾ ಸುಗ್ಗಿ ಅನುಭವಿಸುತ್ತಿರುವ ಗ್ರಾಹಕನಿಗೆ ಮುಂದೆ ಬೆಲೆ ಏರಿಕೆಯ ಬಿಸಿ ಕಾದಿವೆ.

Follow Us:
Download App:
  • android
  • ios