ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! 303 ರೂ ಜಿಯೋ ಪ್ರೈಮ್ ಪ್ಲಾನ್ ಮೆಂಬರ್ ಶಿಪ್ ಹಾಗೂ ಇತರೆ ಪ್ಲಾನ್ ಗಳ ಗಡುವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಸಮ್ಮರ್ ಸರ್ಪೈಸನ್ನು ಗ್ರಾಹಕರಿಗೆ ನೀಡಲಿದೆ.
ನವದೆಹಲಿ (ಮಾ.31): ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! 303 ರೂ ಜಿಯೋ ಪ್ರೈಮ್ ಪ್ಲಾನ್ ಮೆಂಬರ್ ಶಿಪ್ ಹಾಗೂ ಇತರೆ ಪ್ಲಾನ್ ಗಳ ಗಡುವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಸಮ್ಮರ್ ಸರ್ಪೈಸನ್ನು ಗ್ರಾಹಕರಿಗೆ ನೀಡಲಿದೆ.
ಜಿಯೋ ಪ್ರೈಮ್ ಮೆಂಬರ್ ಶಿಪ್ ಗೆ ಈಗಾಗಲೇ 72 ಮಿಲಿಯನ್ ಗ್ರಾಹಕರಾಗಿದ್ದಾರೆ. ಇದು ಜಗತ್ತಿನಲ್ಲೇ ಯಶಸ್ವೀ ಗ್ರಾಹಕ ಯೋಜನೆಯಾಗಿದೆ ಎಂದು ಜಿಯೋ ಕಂಪನಿ ಹೇಳಿಕೊಂಡಿದೆ.
ಜಿಯೋ ಮೆಂಬರ್ ಶಿಪ್ ಪಡೆಯಲು ಗ್ರಾಹಕರಿಂದ ಅಭೂತಪೂರ್ವ ಬೇಡಿಕೆ ಹೆಚ್ಚಾಗಿರುವುದರಿಂದ ರೂ.303 ಹಾಗೂ ಇತರೆ ಪ್ಲಾನ್ ಗಳ ಗಡುವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಿದೆ. ಏಪ್ರಿಲ್ 15 ರೊಳಗೆ ರಿಚಾರ್ಜ್ ಮಾಡಿಸಿಕೊಳ್ಳದಿದ್ದರೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.
ಏಪ್ರಿಲ್ 15 ಕ್ಕಿಂತ ಮುಂಚೆ ರೂ.303 ಅಥವಾ ಅದಕ್ಕಿಂತ ಹೆಚ್ಚು ರೀಚಾರ್ಜ್ ಮಾಡಿಸಿಕೊಂಡಿರುವ ಜಿಯೋ ಪ್ರೈಮ್ ಮೆಂಬರ್ಸ್ ಗೆ ಕೊಡುಗೆಯಾಗಿ ಮೊದಲ 3 ತಿಂಗಳು ಉಚಿತ ಸೇವೆ ನೀಡಲಿದೆ. ಜುಲೈ ನಂತರ ಟಾರೀಫ್ ಪ್ಲಾನ್ ಅನ್ವಯವಾಗಲಿದೆ. ಅಲ್ಲಿಯವರೆಗೆ ಉಚಿವ ಸೇವೆಯನ್ನು ಎಂಜಾಯ್ ಮಾಡಬಹುದು.
ಜಿಯೋವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಈ ಚಳುವಳಿ ಭಾರತವನ್ನು ಬದಲಾಯಿಸುತ್ತದೆ. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು ನಿಮ್ಮನ್ನು ಇನ್ನಷ್ಟು ಸಬಲೀಕರಣಗೊಳಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
