ಡಿಸೆಂಬರ್ 3ಕ್ಕೆ ಜಿಯೋ ವೆಲ್‌ಕಮ್  ಆಫರ್ ಮುಗಿಯಬೇಕಿತ್ತು. ಆದರೆ, ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ಮೂಲಕ ಉಚಿತ ಕರೆ, ಉಚಿತ ಡಾಟಾ ಮತ್ತು ಉಚಿತ ಎಸ್‌ಎಂಎಸ್ ಕೊಡುಗೆ ನೀಡಿದೆ. ಇದನ್ನ ಪ್ರಶ್ನಿಸಿ ಏರ್‌ಟೆಲ್, ಐಡಿಯಾ, ವೊಡಾಫೋನ್ ಟ್ರಾಯ್‌`ಗೆ ದೂರು ಸಲ್ಲಿಸಿವೆ. ಈ ನಡುವೆ ಜಿಯೋಗೆ ಸ್ಪರ್ಧೆ ನೀಡಲು, ಏರ್‌ಟೆಲ್, ಐಡಿಯಾ, ಬಿಎಸ್‌ಎನ್‌ಎಲ್ ಹೊಸ ಪ್ಲಾನ್‌`ಗಳನ್ನು ಘೋಷಿಸಿವೆ.

ನವದೆಹಲಿ(ಡಿ.27): ರಿಲಯನ್ಸ್ ಜಿಯೋ ಘೋಷಿಸಿರುವ ಹ್ಯಾಪಿ ನ್ಯೂಇಯರ್ ಪ್ಲಾನ್ ಬಗ್ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್) ತಕಾರಾರು ತೆಗೆದಿದೆ. ಹ್ಯಾಪಿ ನ್ಯೂ ಇಯರ್ ಪ್ಲಾನ್ ಹಾಲಿ ನಿಯಮಗಳ ಉಲ್ಲಂಘನೆ ಆಗಿಲ್ಲವೇ ಎಂಬುದನ್ನು ವಿವರಿಸುವಂತೆ ಜಿಯೋಗೆ ಸೂಚಿಸಿದೆ.