Asianet Suvarna News Asianet Suvarna News

(ವಿಡಿಯೋ) ಅರಸೀಕೆರೆಯ ದೇಗುಲದಲ್ಲಿ ಕೇಳಿಸ್ತಂತೆ ಗೆಜ್ಜೆ ಸದ್ದು : ಎಲ್ಲಿ ಹುಡುಕಿದರೂ ಶಬ್ದ ಪತ್ತೆಯಾಗುತ್ತಿಲ್ಲ , ಧ್ವನಿ ಕೇಳಲು ಜನವೂಜನ

ಅರಸೀಕೆರೆಯ ಮಲ್ಲಿಗೆಯಮ್ಮ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸುತ್ತಿದೆ ಎಂಬ ಸುದ್ದಿಯನ್ನು, ವಿಸ್ಮಯವೆಂದು ತಿಳಿದು ದೇವಸ್ಥಾನದ ಬಳಿ ನೂರಾರು ಜನರು ಜಮಾಯಿಸಿದ್ದರು

jingle sound at arasikere temple

ದೇವಸ್ಥಾನದ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸುತ್ತಿದೆ ಅನ್ನೋ ವದಂತಿಯಿಂದ ದೇವಾಲಯದತ್ತ ಜನರು ದೌಡಾಯಿಸಿದ್ದ  ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.  ಅರಸೀಕೆರೆಯ ಮಲ್ಲಿಗೆಯಮ್ಮ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸುತ್ತಿದೆ ಎಂಬ ಸುದ್ದಿಯನ್ನು, ವಿಸ್ಮಯವೆಂದು ತಿಳಿದು ದೇವಸ್ಥಾನದ ಬಳಿ ನೂರಾರು ಜನರು ಜಮಾಯಿಸಿದ್ದರು. ಗೆಜ್ಜೆನಾದವನ್ನ ಕೇಳಲು ಬೆಳಗ್ಗಿನ ಜಾವದಲ್ಲೂ ಸಾರ್ವಜನಿಕರು ಕೌತುಕದಿಂದ ನೆರೆದಿದ್ದರು.ಅಲ್ಲದೇ ಗೆಜ್ಜೆನಾದದ ಶಬ್ದವನ್ನು ಸ್ಥಳೀಯರು, ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ. ೧೫ ವರ್ಷಗಳ ಹಿಂದೆಯೂ ಮಲ್ಲಿಗೆಯಮ್ಮ ದೇವಾಲಯದ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸಿತ್ತೆಂತು ಸ್ಥಳೀಯರು ಹೇಳುತ್ತಿದ್ದಾರೆ.      

                 

Follow Us:
Download App:
  • android
  • ios