ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆದು ಗುಜರಾತ್‍ನಲ್ಲಿ ಶಾಸಕರಾಗಿರೋ ಜಿಗ್ನೇಶ್ ಮೇವಾನಿ ಸ್ವಾಗತಕ್ಕೆ ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.  

ಚಿಕ್ಕಮಗಳೂರು (ಡಿ.28): ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆದು ಗುಜರಾತ್‍ನಲ್ಲಿ ಶಾಸಕರಾಗಿರೋ ಜಿಗ್ನೇಶ್ ಮೇವಾನಿ ಸ್ವಾಗತಕ್ಕೆ ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೌರಿ ಲಂಕೇಶ್ ಸ್ಮರಣಾರ್ಥ ಬೃಹತ್ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೋಮು ಸೌಹಾರ್ದ ವೇದಿಕೆ 15 ವರ್ಷ ಪೂರೈಸಿದ ಹಿನ್ನೆಲೆ ಇಂದು ಮತ್ತು ನಾಳೆ ಬೃಹತ್ ಸಮಾವೇಶಕ್ಕೆ ಕಾಫಿನಾಡು ಸಜ್ಜಾಗಿದೆ. ‘ಬಾಬಾಬುಡನ್ ಗಿರಿಯನ್ನ ಅಯೋಧ್ಯೆಯಾಗಲು ಬಿಡಲಿಲ್ಲ, ಕರ್ನಾಟಕ ಗುಜರಾತ್ ಆಗೋಕು ಬಿಡಲ್ಲ, ಗೌರಿ ಲಂಕೇಶ್ ಹತ್ಯೆ ವ್ಯರ್ಥವಾಗೋದಿಲ್ಲ’ ಎಂಬ ಘೋಷಣೆಯಡಿ ಸೌಹಾರ್ದ ಮಂಟಪದ ವೇದಿಕೆ ಸಜ್ಜಾಗಿದೆ. ಈ ಕಾರ್ಯಕ್ರಮಕ್ಕೆ ಗುಜರಾತ್‍ನಿಂದ ಆಗಮಿಸುತ್ತಿರುವ ನೂತನ ಶಾಸಕ ಜಿಗ್ನೇಶ್ ಮೇವಾ , ತೀಸ್ತಾ ಸೆಟ್ಲವಾಡ್, ಪ್ರಕಾಶ್ ರೈ ಹಾಗೂ ಅರುಂಧತಿ ರಾಯ್ ಮತ್ತು ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.