* ಕರ್ನಾಟಕದಲ್ಲಿ ಗೌರಿ ಹತ್ಯೆಯಾದಾಗ 'ಇಂಥ ಮಗನನ್ನು ಹೆತ್ತಿದ್ದೇಕೆ?' ಎಂದು ಮೋದಿ ತಾಯಿಗೆ ಪ್ರಶ್ನಿಸೋಣ ಎಂದ ಜಿಗ್ನೇಶ್*ದಲಿತ ಮುಖಂಡನಾಗಿ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಮೇವಾನಿ*ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಶ್ರಮಿಸಿದವರಲ್ಲಿ ಜಿಗ್ನೇಶ್ ಸಹ ಒಬ್ಬರು.
ಅಹ್ಮದಾಬಾದ್: ಗುಜರಾತ್‌ನಲ್ಲಿ ಆರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸೋತರೂ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಪ್ರಧಾನಿ ಮೋದಿಗೆ ಬುದ್ಧಿವಾದ ಹೇಳಿದ್ದಾರೆ.
'ಮೋದಿಗೆ ವಯಸ್ಸಾಗಿದ್ದು, ಹೇಳಿದ್ದೇ ಹೇಳುತ್ತಾರೆ. ಅದೇ ಭಾಷಣಗಳಿಂದ ಜನರು ಬೇಸತ್ತಿದ್ದು, ಅವರೀಗ ರಾಜಕೀಯ ನಿವೃತ್ತಿ ಪಡದರೆ ಒಳಿತು,' ಎಂದು ಹೇಳಿದ್ದಾರೆ.
ಇಂಗ್ಲಿಷ್ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಮೇವಾನಿ, 'ಕಾಂಗ್ರೆಸ್ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಿದ್ದರಿಂದ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದಿದ್ದು, ಮೋದಿ ಹೇಳುವಂತೆ ಜಾತಿ ರಾಜಕಾರಣದಿಂದ ಅಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ, 'ಮೋದಿ ಅವರ ತಾಯಿ ಬಳಿ ಹೋಗಿ ಇಂಥ ಮಗನನ್ನು ಹೆತ್ತಿದ್ದು ಏಕೆಂದು ಪ್ರಶ್ನಿಸೋಣ,' ಎಂಬ ಹೇಳಿಕೆ ನೀಡಿ, ಜಿಗ್ನೇಶ್ ಸುದ್ದಿಯಾಗಿದ್ದರು.
