ಮೊಬೈಲ್ ಕ್ಕದಿದ್ದಾಳೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬಳನ್ನು ಸಹಪಾಠಿಗಳು ವಿವಸ್ತ್ರಗೊಳಿಸಿ ಥಳಿಸಿ, ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾನಗಳಲ್ಲಿ ಹರಿಬಿಟ್ಟ ಘಟನೆ ಜಾರ್ಖಂಡ್’ನಲ್ಲಿ ನಡೆದಿದೆ.
ದುಮ್ಕಾ, ಜಾರ್ಖಂಡ್: ಮೊಬೈಲ್ ಕ್ಕದಿದ್ದಾಳೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬಳನ್ನು ಸಹಪಾಠಿಗಳು ವಿವಸ್ತ್ರಗೊಳಿಸಿ ಥಳಿಸಿ, ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾನಗಳಲ್ಲಿ ಹರಿಬಿಟ್ಟ ಘಟನೆ ಜಾರ್ಖಂಡ್’ನಲ್ಲಿ ನಡೆದಿದೆ.
ದುಮ್ಕಾ ನಗರದ ಸಂತಲ್ ಪರ್ಗಾನಾ ಮಹಿಳಾ ಕಾಲೇಜಿನ ಹಾಸ್ಡೆಲ್’ನಲ್ಲಿ ಈ ಘಟನೆ ಆ.4ಕ್ಕೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ವಿದ್ಯಾರ್ಥಿನಿಯರ ಕುಕೃತ್ಯ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಪ್ರಥಮ ವರ್ಷದ ಬಿ.ಏ ವ್ಯಾಸಾಂಗ ಮಾಡುತ್ತಿದ್ದು, ರೂ. 500 ಕೊಟ್ಟು ಸೆಕೆಂಡ್-ಹ್ಯಾಂಡ್ ಮೊಬೈಲ್ ಖರೀದಿಸಿದ್ದಳು. ಆದರೆ ಆಕೆಯ ಮೇಲೆ ಹಾಸ್ಟೆಲ್’ನ ನ್ನೋರ್ವಾ ವಿದ್ಯಾರ್ಥಿನಿ ಕಳವಿನ ಆರೋಪ ಮಾಡಿದ್ದಾಳೆ. ಮಾತಿಗೆ ಮಾತು ಬೆಳೆದು ವಿದ್ಯಾರ್ಥಿನಿಯರು ಆಕೆಯನ್ನು ನಗ್ನಗೊಳಿಸಿ ಥಳಿಸಿದ್ದಾರೆ. ಅಲ್ಲದೇ ಆಕೆಯ ನಗ್ನ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ಬಳಿಕ ವಿದ್ಯಾರ್ಥಿ ಸಂಘದ ಸಭೆ ಕರೆದು ರೂ. 18, 600 ದಂಡ ಪಾವತಿಸುವಂತೆ ಆಕೆಗೆ ಹೇಳಿದ್ದಾರೆ. ಇಲ್ಲದಿದ್ದರೆ ಆಕೆಯ ನಗ್ನ ವಿಡಿಯೋವನ್ನು ಇತರರೊಂದಿಗೆ ಹಂಚುವುದಾಗಿ ಬೆದರಿಕೆ ಕೂಡಾ ಹಾಕಿದ್ದಾರೆ.
ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿಯು ದೂರು ನೀಡಿದ್ದರೂ, ತಪ್ಪತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ನ್ನಲಾಗಿದೆ.
ಪ್ರಕರಣ ದಾಖಲಿಸಿರುವ ಪೊಲೀಸರು, ಸಂತ್ರಸ್ತ ವಿದ್ಯಾರ್ಥಿನಿಯ 4 ಸಹಪಾಠಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ತನಿಖೆಯು ಮುಂದುವರೆದಿದೆ.
ಈ ನಡುವೆ ಅವಮಾನ ತಾಳಲಾರದೆ ತಾನು ಮಗಳೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ವೃತ್ತಿಯಲ್ಲಿ ರೈತನಾಗಿರುವ ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
