ರಾಂಚಿಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಹಿರಿಯ ಮುಖಂಡರಾದ ಸಿಮೋನ್ ಮರಂಡಿ ಅವರು ಬುಡಕಟ್ಟು ಜನಾಂಗಕ್ಕಾಗಿ ಆಯೋಜಿಸಿದ್ದ  ಕಿಸ್ಸಿಂಗ್ ಕಾಂಪಿಟೇಷನ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ರಾಂಚಿ(ಡಿ.11) : ರಾಂಚಿಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಹಿರಿಯ ಮುಖಂಡರಾದ ಸಿಮೋನ್ ಮರಂಡಿ ಅವರು ಬುಡಕಟ್ಟು ಜನಾಂಗಕ್ಕಾಗಿ ಆಯೋಜಿಸಿದ್ದ ಕಿಸ್ಸಿಂಗ್ ಕಾಂಪಿಟೇಷನ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಅವರ ಕ್ಷೇತ್ರವಾದ ಲಿಟ್ಟಿಪರಾ ಪ್ರದೇಶದ ತಲ್ಪಹರಿಯಲ್ಲಿ ಸಿಮೋನ್ ಮರಂಡಿ ಶನಿವಾರ ರಾತ್ರಿ ಈ ರೀತಿಯಾದ ವಿವಾದಾತ್ಮಕವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದ್ದರು ಎನ್ನಲಾಗಿದೆ.

ಈ ಸ್ಪರ್ಧೆಯಲ್ಲಿ ಮೂರು ಜೋಡಿಗೆ ಬಹುಮಾನವನ್ನು ವಿತರಣೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಸಿಮೋನ್ ಮರಂಡಿ ಆಧುನಿಕತೆ ಹಾಗೂ ಪ್ರೀತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ರೀತಿಯಾದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು.

ಬುಡಕಟ್ಟು ಜನಾಂಗದ ಜನರು ಹೆಚ್ಚು ನಾಚಿಕೆ ಸ್ವಭಾವದವರು. ಅವರಿಂದ ಇಂತಹ ಸ್ವಭಾವವನ್ನು ದೂರ ಮಾಡಲು ಹಾಗೂ ದಂಪತಿ ನಡುವೆ ಹೆಚ್ಚಿನ ತಿಳುವಳಿಕೆ ಮೂಡಿಸಲು ಹಾಗೂ ವಿಚ್ಛೇದನವನ್ನು ಕಡಿಮೆ ಮಾಡುವ ಸಲುವಾಗಿ ಕಾರ್ಯಕ್ರಮ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಕ್ಕೆ ಅನೇಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಾವ ವಿಚಾರವನ್ನು ತಿಳಿಸುತ್ತಿದ್ದಾರೆ. ಇದರಿಂದ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹಾಳುಗೆಡವುತ್ತಿದ್ದಾರೆ ಎಂದು ಹೇಳಿದ್ದಾರೆ.