ನವದೆಹಲಿ (ಡಿ.13): ಕಲ್ಲಿದ್ದಲು ಹಗರಣದಲ್ಲಿ ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ ಸೇರಿದಂತೆ 7 ಮಂದಿ ದೋಷಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.

ಕಲ್ಲಿದ್ದಲು ಮಾಜಿ ಕಾರ್ಯದರ್ಶಿ ಎಚ್ ಸಿ ಗುಪ್ತಾ, ಮಾಜಿ ಕಾರ್ಯದರ್ಶಿ ಎ ಕೆ ಬಸು, ಮಧು ಕೋಡಾ ಸೇರಿದಂತೆ 7 ಮಂದಿ ದೋಷಿಗಳೆಂದು ಸಿಬಿಐ ತೀರ್ಪು ನೀಡಿದೆ.  ನಾಳೆ ಶಿಕ್ಷೆ ಪ್ರಮಾಣ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಕಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಕಲ್ಲಿದ್ದಲು ಹಂಚಿಕೆ ವಿಚಾರದಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದೆ.