ನಕ್ಸಲ್ ಕಮಾಂಡರ್ ಪ್ರದೀಪ್ ಸಿಂಗ್ ಖಾರ್'ವಾರ್ ಐದು ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಟಿಎಸ್ ನಕ್ಸಲ್ ಮುಖಂಡ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದೆ.

ನೋಯ್ಡಾ(ಅ.16): ನಕ್ಸಲ್ ಕಮಾಂಡರ್ ಸೇರಿದಂತೆ ಆತನ ಐದು ಮಂದಿ ಸಹಚರರನ್ನು ಉತ್ತರಪ್ರದೇಶ ಭಯೋತ್ಪಾದನ ನಿಗ್ರಹ ಪಡೆ ಹಾಗೂ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ನಕ್ಸಲ್ ಕಮಾಂಡರ್ ಪ್ರದೀಪ್ ಸಿಂಗ್ ಖಾರ್'ವಾರ್ ಐದು ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಟಿಎಸ್ ನಕ್ಸಲ್ ಮುಖಂಡ ಹಾಗೂ ಆತನ ಸಹಚರರನ್ನು ಬಂಧಿಸಿದೆ.

ನಕ್ಸಲ್ ಕಮಾಂಡರ್ ಪ್ರದೀಪ್ ಸಿಂಗ್ ಖಾರ್'ವಾರ್ 2012ರ ಫೆಬ್ರವರಿಯಿಂದ ತಲೆಮರೆಸಿಕೊಂಡಿದ್ದ, ಆತನಿಂದ ಐದು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಎನ್'ಸಿಆರ್ ಪ್ರಾಂತ್ಯದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು ಎನ್ನಲಾಗುತ್ತಿದ್ದು, ಬಂಧಿತರಿಂದ ಆರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.