ಜಾರ್ಖಂಡ್'ನಲ್ಲಿ ಪಿಎಫ್ಐ ನಿಷೇಧ

First Published 22, Feb 2018, 7:35 PM IST
Jharkhand bans Popular Front of India for spreading anarchy in state
Highlights

ಸರ್ಕಾರದ ನಿರ್ಧಾರವನ್ನು  ಬಿಜೆಪಿ ಶಾಸಕ ಅನಂತ್ ಓಜಾ  ಪ್ರಶಂಸಿಸಿದ್ದು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಇಂತಹ ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ.

ಧುಮ್ಕಾ(ಫೆ.22): ರಾಜ್ಯದಲ್ಲಿ ಅರಾಜಕತೆ ಉಂಟು ಮಾಡುತ್ತಿರುವ ಪರಿಣಾಮ ಜಾರ್ಖಂಡ್ ರಾಜ್ಯವು ಪಿಎಫ್ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ನಿಷೇಧಿಸಿದೆ.

ಗೃಹ ಇಲಾಖೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆಯ ಒಪ್ಪಿಗೆಯ ಮೇರೆಗೆ 1908ರ ಅಪರಾಧ ಕಾನೂನು ತಿದ್ದುಪಡಿ ಕಾಯಿದೆಯ 16ನೇ ಸೆಕ್ಷನ್'ನಡಿ ನಿಷೇಧಗೊಳಿಸಲಾಗಿದೆ.

ಸರ್ಕಾರದ ನಿರ್ಧಾರವನ್ನು  ಬಿಜೆಪಿ ಶಾಸಕ ಅನಂತ್ ಓಜಾ  ಪ್ರಶಂಸಿಸಿದ್ದು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಇಂತಹ ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಸರ್ಕಾರದ  ನಿರ್ಧಾರದಿಂದ  ಭಾಗದಲ್ಲಿ ಅನೇಕ ಬದಲಾವಣೆಗಳುಂಟಾಗುತ್ತವೆ' ಎಂದು ತಿಳಿಸಿದರು.

ಫೆ.17ರಂದು ಜಾರ್ಖಂಡ್'ನ ಪಾಕುರ್ ಜಿಲ್ಲೆಯಲ್ಲಿ ಪಿಎಫ್'ಐ ಸಂಘಟನೆ ಸಂಸ್ಥಾಪಕ ದಿನವನ್ನಾಗಿ ಸಂಭ್ರಮಿಸಿತ್ತು.       

ಪಿಎಫ್ಐ ಭಾರತದಲ್ಲಿ ನ್ಯಾಷನಲ್ ಡೆವಲಪ್'ಮೆಂಟ್ ಪ್ರಂಟ್ ಗೆ ಉತ್ತರಾಧಿಕಾರಿಯಾಗಿ 2006ರಲ್ಲಿ ಸ್ತಾಪಿತವಾದ ಉಗ್ರವಾದಿ ಮತ್ತು ಉಗ್ರಗಾಮಿ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾಗಿದೆ.

(ಸಾಂದರ್ಭಿಕ ಚಿತ್ರ)

loader