ಕಲಬುರಗಿ ನಗರದ ಸರಾಪ್ ಬಜಾರ್​​​​​​ನ ಗಜಾನನ ಜ್ಯುವೆಲ್ಲರಿ ಶಾಪ್​’​​​​​​ನಲ್ಲಿ ಘಟನೆ ನಡೆದಿದ್ದು, ಪೊಲೀಸರು ತಮ್ಮ ಅಧಿಕಾರಿಯನ್ನು ಬಿಡಿಸಿಕೊಂಡು ಹೋಗಲು ಲಾಠಿ ಚಾರ್ಜ್​​ ನಡೆಸಬೇಕಾಯಿತು.

ಕಲಬುರಗಿ (ಫೆ.04): ತನಿಖೆಗೆಂದು ಬಂದಿದ್ದ ಪೊಲೀಸ್ ಅಧಿಕಾರಿಯನ್ನೇ ಚಿನ್ನದ ವ್ಯಾಪಾರಿಗಳು ಕೂಡಿ ಹಾಕಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಮಿಸಿದ್ದ ಅಶೋಕನಗರ ಠಾಣೆಯ ಇನ್ಸ್​​​ಪೆಕ್ಟರ್​​ ಜೇಮ್ಸ್​ ಅವರನ್ನು ವ್ಯಾಪಾರಿಗಳು ಕೂಡಿ ಹಾಕಿದ್ದಾರೆ.

ಕಲಬುರಗಿ ನಗರದ ಸರಾಪ್ ಬಜಾರ್​​​​​​ನ ಗಜಾನನ ಜ್ಯುವೆಲ್ಲರಿ ಶಾಪ್​’​​​​​​ನಲ್ಲಿ ಘಟನೆ ನಡೆದಿದ್ದು, ಪೊಲೀಸರು ತಮ್ಮ ಅಧಿಕಾರಿಯನ್ನು ಬಿಡಿಸಿಕೊಂಡು ಹೋಗಲು ಲಾಠಿ ಚಾರ್ಜ್​​ ನಡೆಸಬೇಕಾಯಿತು.

ವಿನಾಕಾರಣ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು,ಹೆಚ್ಚುವರಿ ಎಸ್.ಪಿ. ಜಯಪ್ರಕಾಶ ಭೇಟಿ ನೀಡಿದ್ದಾರೆ.