ಮುಂಬೈ : ಜೆಟ್ ಏರ್ ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮವಾಗಿ ಪ್ರಯಾಣಿಕರು ಅನಾರೋಗ್ಯಕ್ಕೆ ಒಳಗಾದ ಘಟನೆ ಗುರುವಾರ ನಡೆದಿದೆ. 

ಈ ಸಂಬಂಧ ನಾಗರಿಕ ವಿಮಾನ ಯಾನ ಸಚಿವಾಲಯವು ಸೂಕ್ತ ತನಿಖೆ ನಡೆಸುವಂತೆ ಆದೇಶ ನೀಡಿದೆ. 

ಈ ಸಂಬಂಧ ತನಿಖೆ ನಡೆಸಿ ಆದಷ್ಟು ಶೀಘ್ರವೇ ವರದಿಯನ್ನು ನೀಡಬೇಕು ಎಂದು  ನಾಗರಿಕ ವಿಮಾನ ಯಾನ ಸಚಿವಾಲಯವು ಜೆಟ್ ಏರ್ ವೇಸ್ ನಿರ್ದೇಶಕರಿಗೆ ತಿಳಿಸಿದೆ. 

9w 0697 ಏರ್ ವೇಸ್ ಮುಂಬೈ ನಿಂದ ಜೈಪುರಕ್ಕೆ ತೆರಳುತ್ತಿತ್ತು. ಇದರಲ್ಲಿ  30 ಮಂದಿ ಪ್ರಯಾಣಿಕರಿದ್ದು , ಇದರ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಣಾ ಸ್ವಿಚ್ ಹಾಕುವುದನ್ನು ಮರೆತದ್ದರಿಂದ ಈ ಅವಘಡ ಸಂಭವಿಸಿದೆ. 

ಅಲ್ಲದೇ ಕಲವು ಪ್ರಯಾಣಿಕರಿಗೆ ಕಿವಿ ಮೂಗಿನಲ್ಲಿಯೂ ಕೂಡ ಈ ವೇಳೆ ರಕ್ತ ಸೋರಿಕೆಯಾಗಿದ್ದು, ಇವರೆಲ್ಲರನ್ನೂ ಕೂಡ ತಕ್ಷಣವೇ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ.